HomeKarnatakaಮನೆಯ ಬೆಡ್ ರೂಂ ನಲ್ಲಿತ್ತು ಬರೋಬ್ಬರಿ 7 ಅಡಿ ಉದ್ದದ ಕಾಳಿಂಗ ಸರ್ಪ....!

ಮನೆಯ ಬೆಡ್ ರೂಂ ನಲ್ಲಿತ್ತು ಬರೋಬ್ಬರಿ 7 ಅಡಿ ಉದ್ದದ ಕಾಳಿಂಗ ಸರ್ಪ….!

ಹಾವು ಎಂದರೆ ಸಾಮಾನ್ಯವಾಗಿ ಎಲ್ಲರೂ ಬೆಚ್ಚಿಬೀಳುತ್ತಾರೆ. ಅದನ್ನು ಕಂಡರೆ ಮಾರು ದೂರ ಹಾರುವವರ ನಡುವೆ ಅದನ್ನು ಚಾಣಾಕ್ಷತನದಿಂದ ಹಿಡಿಯುವವರೂ ಇದ್ದಾರೆ. ಸಾಮಾನ್ಯವಾಗಿ ಹೊರಗೆ ಕಾಣುವ ಹಾವು ಮನೆ ಒಳಗೆ ಕಂಡು ಬಂದರೆ ?

ಹೌದು, ಇಂತದೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಸುಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವರ ಗೋಳಿಕಟ್ಟೆ ಎಂಬಲ್ಲಿ ನಡೆದಿದ್ದು, ದಿನೇಶ್ ಕುಮಾರ್ ಎಂಬವರ ಮನೆಯ ಬೆಡ್ ರೂಂ ನಲ್ಲಿ ಬರೋಬ್ಬರಿ 7 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ.

ಇದನ್ನು ನೋಡುತ್ತಿದ್ದಂತೆ ಭಯಭೀತರಾದ ಮನೆಯವರು ಉರಗತಜ್ಞ ಸ್ನೇಕ್ ಅಶೋಕ್ ಎಂಬವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅವರು ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular