HomeAutoಆಗುಂಬೆ ಘಾಟಿಯಲ್ಲಿ ಬೈಕ್ - ಬಸ್ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಅಣ್ಣ - ಸಹೋದರಿ ಸ್ಥಿತಿ...

ಆಗುಂಬೆ ಘಾಟಿಯಲ್ಲಿ ಬೈಕ್ – ಬಸ್ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಅಣ್ಣ – ಸಹೋದರಿ ಸ್ಥಿತಿ ಗಂಭೀರ

ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಣ್ಣ ಸ್ಥಳದಲ್ಲೇ ಮೃತಪಟ್ಟಿದ್ದು,   ಸಹೋದರಿ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರ್ಕೂರು ಹೆರಾಡಿ ಗ್ರಾಮದ 21 ವರ್ಷದ ಶಶಾಂಕ್ ಮೃತಪಟ್ಟವರಾಗಿದ್ದು, ಅವರ ಸಹೋದರಿ 19 ವರ್ಷದ ನಿರ್ಮಿತ ಗಂಭೀರಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಗುಂಬೆ ವೀಕ್ಷಿಸುವ ಸಲುವಾಗಿ ಕುಟುಂಬದವರೊಂದಿಗೆ ಬೈಕಿನಲ್ಲಿ ಬಂದಿದ್ದ ಇವರುಗಳು ವಾಪಸ್ ಊರಿಗೆ ತೆರಳುವ ವೇಳೆ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular