HomeKarnatakaಮಗನ ಸಾವಿನ ನೋವಿನಲ್ಲೂ 'ಅಂಗಾಂಗ' ದಾನ ಮಾಡಿ ಮಾದರಿಯಾದ ಕುಟುಂಬ

ಮಗನ ಸಾವಿನ ನೋವಿನಲ್ಲೂ ‘ಅಂಗಾಂಗ’ ದಾನ ಮಾಡಿ ಮಾದರಿಯಾದ ಕುಟುಂಬ

ಮಗನ ಸಾವಿನ ನೋವಿನಲ್ಲೂ ಕುಟುಂಬವೊಂದು ಅಂಗಾಂಗ ದಾನ ಮಾಡಿ ಹಲವರ ಬದುಕಿಗೆ ಬೆಳಕಾದ ಮಾನವೀಯ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ನೀರಗುಂಡಿಯ ಈ ಕುಟುಂಬ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೆಂಚನಹಳ್ಳಿ ನೀರುಗುಂಡಿ ನಿವಾಸಿ 21 ವರ್ಷದ ಉಲ್ಲಾಸ್ ಇತ್ತೀಚೆಗೆ ಚನ್ನಗಿರಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಸಹ ಉಲ್ಲಾಸ್ ಬದುಕುಳಿಯಲಿಲ್ಲ. ಈ ಸಂದರ್ಭದಲ್ಲಿ ಪೋಷಕರು, ಉಲ್ಲಾಸ್ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದು, ವಿವಿಧ ಆಸ್ಪತ್ರೆಗಳಲ್ಲಿದ್ದ ಏಳು ಮಂದಿಗೆ ಇದನ್ನು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular