HomeLatest Newsಬೇಸಿಗೆಯ ಧಗೆಯಲ್ಲಿ ಸವಿಯಿರಿ ಬೆಲ್ಲದ ಪಾನಕ

ಬೇಸಿಗೆಯ ಧಗೆಯಲ್ಲಿ ಸವಿಯಿರಿ ಬೆಲ್ಲದ ಪಾನಕ

ಬೇಸಿಗೆಯ ಬಿಸಿಲಿಗೆ ಹೊರಗೆ ಹೋಗಿ ಬಂದರೆ ತಲೆ ತಿರುಗಿದಂತೆ ಆಗುತ್ತದೆ. ಹೊರಗಡೆ ಸಿಗುವ ತಂಪು ಪಾನೀಯಗಳನ್ನು ತಂದು ಫ್ರಿಡ್ಜ್ ನಲ್ಲಿಟ್ಟುಕೊಂಡು ಕುಡಿಯುವ ಬದಲು ಮನೆಯಲ್ಲಿಯೇ ಬೆಲ್ಲದ ಪಾನಕ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ರುಚಿಕರವಾಗಿರುತ್ತದೆ.ಬೇಕಾಗುವ ಸಾಮಾಗ್ರಿಗಳು:

1 ಲೀಟರ್ ನೀರು, 250 ಗ್ರಾಂ ಬೆಲ್ಲ, ಅರ್ಧ ಖರ್ಬೂಜ ಹಣ್ಣಿನ ಹೋಳುಗಳು, ಲಿಂಬೆಹಣ್ಣು-1, ಏಲ್ಕಕಿ-ಪುಡಿ ¼ ಟೀ ಸ್ಪೂನ್.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ ಖರ್ಬೂಜ ಹಣ್ಣಿನ ಹೋಳುಗಳನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ . ನಂತರ ನೀರಿನಲ್ಲಿ ಕರಗಿಸಿಟ್ಟುಕೊಂಡ ಬೆಲ್ಲದ ನೀರನ್ನು ಈ ಖರ್ಬೂಜದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ, ಲಿಂಬೆ ಹಣ್ಣಿನ ರಸ ಹಿಂಡಿ. ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಪಾನಕ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular