HomeHealthವ್ಯಾಯಾಮ ಬೇಡ, ಡಯಟ್‌ ಅಗತ್ಯವಿಲ್ಲ: ಕೇವಲ ನಿದ್ದೆಯಿಂದಲೇ ಇಳಿಸಬಹುದು ತೂಕ.....!

ವ್ಯಾಯಾಮ ಬೇಡ, ಡಯಟ್‌ ಅಗತ್ಯವಿಲ್ಲ: ಕೇವಲ ನಿದ್ದೆಯಿಂದಲೇ ಇಳಿಸಬಹುದು ತೂಕ…..!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಬಹುತೇಕ ಎಲ್ಲರೂ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಅನೇಕ ಪ್ರಯತ್ನಗಳ ನಂತರವೂ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಕೆಲವೊಂದು ಸುಲಭದ ಕ್ರಮಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ವ್ಯಾಯಾಮ ಅಥವಾ ಡಯಟ್‌ ಮಾಡಬೇಕಿಲ್ಲ. ಕೇವಲ ನಿದ್ದೆ ಮಾಡುವ ಮೂಲಕ ತೂಕ ಇಳಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೂಕ ಹೆಚ್ಚಾಗುವುದಕ್ಕೆ ಮೂಲಕ ಕಾರಣವೆಂದರೆ ದೇಹದ ಚಯಾಪಚಯ ಕ್ರಿಯೆಯ ಕ್ಷೀಣತೆ. ಇದರಿಂದಾಗಿ ದೇಹದ ಕೊಬ್ಬು ಹೆಚ್ಚಾಗುತ್ತದೆ. ತೂಕ ಹೆಚ್ಚಾಗಲು ಕಡಿಮೆ ನಿದ್ರೆಯೂ ಕಾರಣ ಎಂಬುದು ಹಲವು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಸ್ಥೂಲಕಾಯವನ್ನು ಕಡಿಮೆ ಮಾಡಲು ನಿದ್ರೆ ಬಹಳ ಮುಖ್ಯ. ಚೆನ್ನಾಗಿ ನಿದ್ರೆ ಮಾಡುವುದರಿಂದ ಚಯಾಪಚಯವನ್ನು ಸರಿಯಾಗಿ ಇರುತ್ತದೆ. ಇದು ಬೊಜ್ಜು ನಿಯಂತ್ರಣಕ್ಕೆ ಕಾರಣವಾಗುತ್ತದೆ. ಹೆಚ್ಚು ನಿದ್ರೆ ಮಾಡುವುದರಿಂದ ದೇಹದ BMI ಕಡಿಮೆಯಾಗುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ. ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಅಗತ್ಯ.

ಕಡಿಮೆ ನಿದ್ರೆಯು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ನಿದ್ದೆ ಕಡಿಮೆಯಾದಾಗ ಹಸಿವಿನ ಹಾರ್ಮೋನ್ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ನಾವು ಅತಿಯಾಗಿ ತಿನ್ನಲು ಪ್ರಾರಂಭಿಸುತ್ತೇವೆ. ಪರಿಣಾಮ ತೂಕ ಹೆಚ್ಚಾಗುತ್ತದೆ.  ಕೆಟ್ಟ ಜೀವನಶೈಲಿಯು ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಆರೋಗ್ಯಕರವಾಗಿರಲು ದೇಹದ ಗಡಿಯಾರವನ್ನು ಅನುಸರಿಸುವುದು ಬಹಳ ಮುಖ್ಯ. ಏಕೆಂದರೆ ದೇಹಕ್ಕೂ ಒಂದು ಗಡಿಯಾರವಿದೆ, ಅದು ಸೂರ್ಯನಿಗೆ ಅನುಗುಣವಾಗಿ ಚಲಿಸುತ್ತದೆ ಮತ್ತು ಅದನ್ನು ಅನುಸರಿಸದಿದ್ದರೆ ದೇಹದ ಚಕ್ರವು ಹಾಳಾಗುತ್ತದೆ.

ದೇಹದ ಗಡಿಯಾರವನ್ನು ಅನುಸರಿಸಲು ಮೊದಲನೆಯದಾಗಿ ನೀವು ಮಲಗುವ ಮತ್ತು ಏಳುವ ಸಮಯವನ್ನು ನಿಗದಿಪಡಿಸುವುದು ಬಹಳ ಮುಖ್ಯ. ಇದರಿಂದ ಬೊಜ್ಜು ಕಡಿಮೆಯಾಗುವುದರ ಜೊತೆಗೆ ಅನೇಕ ರೋಗಗಳು ಕೂಡ ನಮ್ಮ ಹತ್ತಿರ ಸುಳಿಯುವುದಿಲ್ಲ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ ಚಯಾಪಚಯವು ಹದಗೆಡುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿಯ ಅತಿದೊಡ್ಡ ಮೂಲವಾಗಿದೆ. ಆದ್ದರಿಂದ ನೀವು ದೇಹದಲ್ಲಿ ವಿಟಮಿನ್ ಡಿ ಅನ್ನು ಸಮತೋಲನಗೊಳಿಸಲು ಬಯಸಿದರೆ, ಸೂರ್ಯನ ಬೆಳಕನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ದಿನದಲ್ಲಿ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular