HomeRecipiesಬಾಯಲ್ಲಿ ನೀರೂರಿಸುವ ರವೆ ಕೋಡು ಬಳೆ ಮಾಡುವ ವಿಧಾನ

ಬಾಯಲ್ಲಿ ನೀರೂರಿಸುವ ರವೆ ಕೋಡು ಬಳೆ ಮಾಡುವ ವಿಧಾನ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 ಗ್ರಾಂ, ತೆಂಗಿನಕಾಯಿ-1 ಹೋಳು,  ಹಸಿಮೆಣಸಿನಕಾಯಿ-6, ಅಡಿಗೆ ಸೋಡಾ- ಸ್ವಲ್ಪ, ತುಪ್ಪ-2 ಚಮಚ, ಉಪ್ಪು ಹಾಗೂ ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ:

ಒಂದು ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಒಲೆಯ ಮೇಲೆ ಇಡಿ. ಕಾದ ಮೇಲೆ ಚಿರೋಟಿ ರವೆಯನ್ನು ಅದರಲ್ಲಿ ಹಾಕಿ ಉರಿದುಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಹುರಿದುಕೊಂಡ ರವೆ, ತೆಂಗಿನ ತುರಿ, ಕತ್ತರಿಸಿದ ಹಸಿಮೆಣಸಿನ ಕಾಯಿ, ಅಡಿಗೆ ಸೋಡಾ, ಸ್ವಲ್ಪ ಉಪ್ಪು ಮೊಸರು ಹಾಕಿ ಹದವಾಗಿ ಕಲಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ, ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಕೋಡುಬಳೆ ಆಕಾರಕ್ಕೆ ಮಾಡಿಕೊಂಡು ಕರಿಯಿರಿ. ಕೆಂಪಗೆ ಕಾದ ಬಳಿಕ ಹೊರ ತೆಗೆಯಿರಿ. ನಿಮಗೆ ತಿನ್ನಲು ರುಚಿಕರವಾದ ಕೋಡುಬಳೆ ಸಿದ್ದವಾಗಿರುತ್ತವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular