HomeLatest Newsಕ್ರಿಕೆಟ್ ಅಭಿಮಾನಿ ಮಹಿಳೆಯರಿಗೆ ಬಿಸಿಸಿಐ ನಿಂದ ಭರ್ಜರಿ 'ಗುಡ್ ನ್ಯೂಸ್'

ಕ್ರಿಕೆಟ್ ಅಭಿಮಾನಿ ಮಹಿಳೆಯರಿಗೆ ಬಿಸಿಸಿಐ ನಿಂದ ಭರ್ಜರಿ ‘ಗುಡ್ ನ್ಯೂಸ್’

ಐಪಿಎಲ್ ಮಾದರಿಯಲ್ಲಿ ಮಹಿಳೆಯರ ಟಿ20 ಲೀಗ್ ಆರಂಭವಾಗುತ್ತಿದ್ದು, ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಮಧ್ಯೆ ಬಿಸಿಸಿಐ, ಕ್ರಿಕೆಟ್ ಅಭಿಮಾನಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಮಹಿಳೆಯರಿಗೆ ಟಿ20 ಪಂದ್ಯಗಳನ್ನು ವೀಕ್ಷಿಸಲು ಉಚಿತ ಪ್ರವೇಶ ನೀಡಲು ತೀರ್ಮಾನಿಸಲಾಗಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿಗಳನ್ನು ಮೀಸಲಾಗಿರಿಸಲಾಗುತ್ತದೆ. ಇಲ್ಲಿ ಮಾತ್ರ ಉಚಿತ ಪ್ರವೇಶವಿರಲಿದೆ.

ಜನರಲ್ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸಲು ಮಹಿಳೆಯರು ಟಿಕೆಟ್ ಖರೀದಿಸಬೇಕಾಗಿದ್ದು, ಉಚಿತ ಟಿಕೆಟ್ ಗಳನ್ನೂ ಸಹ ‘ಬುಕ್ ಮೈ ಶೋ’ ನಲ್ಲಿ ಮುಂಚಿತವಾಗಿಯೇ ಕಾಯ್ದಿರಿಸಬೇಕಾಗುತ್ತದೆ. ಎಲ್ಲ 22 ಪಂದ್ಯಗಳು ಮುಂಬೈನಲ್ಲಿಯೇ ನಡೆಯಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular