HomeIndiaBREAKING: ತ್ರಿಪುರದಲ್ಲಿ ಬಿಜೆಪಿಗೆ ಬಾರಿ ಮುನ್ನಡೆ, ನಾಗಾಲ್ಯಾಂಡ್ ನಲ್ಲಿ NDPP ಗೆ 31 ಸ್ಥಾನ

BREAKING: ತ್ರಿಪುರದಲ್ಲಿ ಬಿಜೆಪಿಗೆ ಬಾರಿ ಮುನ್ನಡೆ, ನಾಗಾಲ್ಯಾಂಡ್ ನಲ್ಲಿ NDPP ಗೆ 31 ಸ್ಥಾನ

ನವದೆಹಲಿ: ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ 60 ವಿಧಾನಸಭಾ ಕ್ಷೇತ್ರಗಳಿದ್ದು, ಮತ ಎಣಿಕೆ ಆರಂಭವಾಗಿದೆ.

ಆರಂಭಿಕ ಸುತ್ತುಗಳಲ್ಲಿ ತ್ರಿಪುರದ 60 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳ ಮತ ಎಣಿಕೆ ಶುರುವಾಗಿದ್ದು, ಬಿಜೆಪಿ ಮೈತ್ರಿಕೂಟ 35, ಸಿಪಿಎಂ 4, ಟಿಎಂಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಗಾಲ್ಯಾಂಡ್ 60 ಕ್ಷೇತ್ರಗಳಲ್ಲಿ 42 ಕ್ಷೇತ್ರಗಳ ಮತ ಎಣಿಕೆ ಆರಂಭಿಕ ಸುತ್ತಿನಲ್ಲಿ ಎನ್‌ಡಿಪಿಪಿ 31, ಎನ್‌ಪಿಎಫ್ 10, ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಮೇಘಾಲಯದ 60 ಕ್ಷೇತ್ರಗಳಲ್ಲಿ 56 ಕ್ಷೇತ್ರಗಳ ಮತ ಎಣಿಕೆ ಶುರುವಾಗಿದ್ದು, ಬಿಜೆಪಿ 10, ಕಾಂಗ್ರೆಸ್ 6, ಎನ್.ಪಿ.ಪಿ. 25, ಇತರರು 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular