alex Certify ಸೋಲಿನ ನಂತ್ರ ಪತ್ನಿ, ಆಟಗಾರರ ಜೊತೆ ಕೊಹ್ಲಿ ಟ್ರಿಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಲಿನ ನಂತ್ರ ಪತ್ನಿ, ಆಟಗಾರರ ಜೊತೆ ಕೊಹ್ಲಿ ಟ್ರಿಪ್

ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದೆ. ಏಕದಿನ ಸರಣಿಯಲ್ಲಿ ಇಂಗ್ಲೆಂಡನ್ನು ಕ್ಲೀನ್ ಸ್ವಿಪ್ ಮಾಡುವ ಕನಸು ಕಂಡಿದ್ದ ಕೊಹ್ಲಿ ಅದ್ರಲ್ಲಿ ಯಶಸ್ವಿಯಾಗಲಿಲ್ಲ. ನಂಬರ್ 1 ಟೀಂ ಪಟ್ಟಕ್ಕೇರುವ ಆಸೆಗೂ ಗ್ರಹಣ ತಟ್ಟಿದೆ. ಇದೇ ಬೇಸರದಲ್ಲಿರುವ ಟೀಮ್ ಇಂಡಿಯಾ ನಾಯಕ ಕೊಹ್ಲಿಗೆ ತಂಡದ ಇತರ ಸದಸ್ಯರು ಹಾಗೂ ಪತ್ನಿ ಉತ್ಸಾಹ ತುಂಬಿದ್ದಾರೆ.

ಭಾರತ ತಂಡದ ಆಟಗಾರ ಕೆ.ಎಲ್.ರಾಹುಲ್ ಇನ್ಸ್ಟ್ರಾಗ್ರಾಮನ್ ನಲ್ಲಿ ಫೋಟೋ ಒಂದನ್ನು ಹಾಕಿದ್ದಾರೆ. ರಾಹುಲ್ ಜೊತೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ವಿದೇಶದಲ್ಲಿ ರೈಲು ಪ್ರಯಾಣದ ಮಜ ಸವಿಯುತ್ತಿದ್ದಾರೆ ಆಟಗಾರರು. ರಾಹುಲ್ ಫೋಟೋಕ್ಕೆ #UKDiaries ಎಂದು ಶೀರ್ಷಿಕೆ ಹಾಕಿದ್ದಾರೆ.

ಭಾರತೀಯ ರೈಲಿನಲ್ಲಿ ಆಟಗಾರರು ಇಷ್ಟು ಎಂಜಾಯ್ ಮಾಡ್ತಾರಾ ಎಂಬ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇಂಗ್ಲೆಂಡ್ ರೈಲಿನಲ್ಲಿ ಆಟಗಾರರು ಎಂಜಾಯ್ ಮಾಡ್ತಿರುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಪಂದ್ಯ ಹಾಗೂ ತರಬೇತಿ ಜೊತೆ ಜೊತೆಯಲ್ಲೇ ಇಂಗ್ಲೆಂಡ್ ಪ್ರವಾಸವನ್ನು ಆಟಗಾರರು ಎಂಜಾಯ್ ಮಾಡ್ತಿದ್ದಾರೆ. ಕೊಹ್ಲಿ-ಅನುಷ್ಕಾರ ಕೆಲ ಫೋಟೋಗಳು ಈಗಾಗಲೇ ವೈರಲ್ ಆಗಿವೆ. ಕೆಲ ದಿನಗಳ ಹಿಂದೆ ಕೊಹ್ಲಿ ಪತ್ನಿ ಜೊತೆಗಿರುವ ರೋಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...