alex Certify ತಡರಾತ್ರಿ ಭೀಕರ ಅಪಘಾತದಲ್ಲಿ ವೈದ್ಯ ದಂಪತಿ ಸೇರಿ 7 ಮಂದಿ ಸಾವು, ಮೃತರ ಗುರುತು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಭೀಕರ ಅಪಘಾತದಲ್ಲಿ ವೈದ್ಯ ದಂಪತಿ ಸೇರಿ 7 ಮಂದಿ ಸಾವು, ಮೃತರ ಗುರುತು ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ.

ಬೆಂಗಳೂರಿನ ಕೋರಮಂಗಲದಲ್ಲಿ ವಿದ್ಯುತ್ ಕಂಬಕ್ಕೆ ಐಷಾರಾಮಿ ಕಾರ್ ಡಿಕ್ಕಿಯಾಗಿ ಕಾರಿನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ. ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ರವಿಕಾಂತೇಗೌಡ ಹೇಳಿದ್ದಾರೆ.

ಕಾರಿನ ಮುಂದಿನ ಸೀಟಿನಲ್ಲಿ ಮೂವರು ಕುಳಿತಿದ್ದರು. ಹಿಂಬದಿ ಸೀಟಿನಲ್ಲಿ ನಾಲ್ವರು ಕುಳಿತಿದ್ದ ಬಗ್ಗೆ ಮಾಹಿತಿ ಗೊತ್ತಾಗಿದೆ. ಮೃತರು ಸ್ನೇಹಿತರಾಗಿದ್ದು 20ರಿಂದ 30 ವರ್ಷದವರು. ಹೊಸೂರು ಮೂಲದ ಕರುಣಾಸಾಗರ್, ಅವರ ಪತ್ನಿ ಬಿಂದು, ಕೇರಳ ಮೂಲದ ಅಕ್ಷಯ್, ಇಶಿತಾ, ಧನುಷಾ, ಹುಬ್ಬಳ್ಳಿಯ ರೋಹಿತ್, ಹರಿಯಾಣದ ಉತ್ಸವ್ ಮೃತಪಟ್ಟವರು ಎಂದು ಹೇಳಲಾಗಿದೆ.

ಸೆಂಟ್ ಜಾನ್ಸ್ ಆಸ್ಪತ್ರೆಗೆ ಮೃತದೇಹಗಳನ್ನು ಸಾಗಿಸಲಾಗಿದ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಮಧ್ಯ ಸೇವನೆ ಮಾಡಿದ್ದರೆ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...