alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ

ganapati

ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ನಾನಾ ರೀತಿಯ, ವಿನ್ಯಾಸದ ಆಕರ್ಷಕ ಗಣಪತಿಗಳನ್ನು ಕಲಾವಿದರು ಸಿದ್ಧಪಡಿಸಿದ್ದು, ಮೂರ್ತಿಗಳಿಗೆ ಫೈನಲ್ ಟಚ್ ನೀಡತೊಡಗಿದ್ದಾರೆ. ಹಲವೆಡೆ ಈಗಾಗಲೇ ಗಣಪತಿಗಳು ಮಾರುಕಟ್ಟೆಗೆ ಬಂದಿದ್ದು, ವಿವಿಧ ಭಂಗಿಯಲ್ಲಿರುವ ಗಣಪತಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಗಣಪತಿ ಸಂಘದವರು ಮೂರ್ತಿಯನ್ನು ಪ್ರತಿಷ್ಠಾಪಿಸಲು ಈಗಾಗಲೇ ಪೆಂಡಾಲ್, ಮಂಟಪ ನಿರ್ಮಾಣ ಮಾಡಿದ್ದು, ಅಂತಿಮ ತಯಾರಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬ ವಿಶೇಷವಾಗಿ ಯುವಕರ ಹಬ್ಬ. ಅದೇ ರೀತಿ ಹೆಣ್ಣು ಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು. ಎರಡು ಹಬ್ಬಗಳು ಒಟ್ಟಿಗೇ ಬರುವುದರಿಂದ ಸಂಭ್ರಮವೇ ಬೇರೆ ರೀತಿಯದು.

ಕೆಲವು ಯುವಕ ಸಂಘದವರು ತಮಗೆ ಬೇಕಾದ ರೀತಿಯಲ್ಲಿ ಗಣಪತಿ ರೆಡಿ ಮಾಡಿಕೊಡುವಂತೆ ಕಲಾವಿದರಿಗೆ ಮುಂಗಡ ನೀಡಿದ್ದು, ಅಲ್ಲಿಂದಲೇ ಗಣಪತಿಯನ್ನು ಕೊಂಡೊಯ್ಯಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಚೌತಿಯಂದು ಗಣೇಶ ಚತುರ್ಥಿ ಬರುತ್ತದೆ. ಅಂದಿನ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಗಣಪತಿ ಮೂರ್ತಿಗಳ ತಯಾರಿಕೆ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತೀ ವರ್ಷವೂ ಸಹ ತಯಾರಿಸಿದ ಮೂರ್ತಿ ಅಷ್ಟೂ ಪ್ರಮಾಣದಲ್ಲಿ  ಖರ್ಚಾಗುವುದಿಲ್ಲ ಎನ್ನುತ್ತಾರೆ ಕಲಾವಿದರೊಬ್ಬರು. ಈ ಸಲ ಮಾರುಕಟ್ಟೆಯಲ್ಲಿ ಗೌರಿ ಮೂರ್ತಿಗಳು ಕನಿಷ್ಠ ಬೆಲೆಯಿಂದ ಗರಿಷ್ಠ ಬೆಲೆವರೆಗೂ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...