alex Certify ದಿಢೀರ್‌ ನೆ ತಯಾರಿಸಬಹುದಾದ ಈರುಳ್ಳಿ ಪಲಾವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಢೀರ್‌ ನೆ ತಯಾರಿಸಬಹುದಾದ ಈರುಳ್ಳಿ ಪಲಾವ್

ಅತಿ ಕಡಿಮೆ ಪದಾರ್ಥದಲ್ಲಿ, ಅತಿ ಬೇಗ ಈರುಳ್ಳಿ ಪಲಾವ್ ಮಾಡಬಹುದು. ಇದು ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ಪಲಾವ್.

ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, 2 ಚೂರು ದಾಲ್ಚಿನಿ, ಒಂದು ಚಮಚ ಜೀರಿಗೆ, 2 ಬಟ್ಟಲು ತುಪ್ಪ, 1/2 ಕೆ.ಜಿ ಸಾಂಬಾರ ಈರುಳ್ಳಿ, 4 ಹಸಿಮೆಣಸಿನ ಕಾಯಿ, ಒಂದು ಬಟ್ಟಲು ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು 20 ನಿಮಿಷ ನೆನೆಸಿ, ನೀರು ಚೆಲ್ಲಿಡಿ. ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಜೀರಿಗೆ, ಈರುಳ್ಳಿ, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಲವಂಗ, ದಾಲ್ಚಿನಿ ಹಾಕಿ. ಅಕ್ಕಿ ಹಾಕಿ ಸ್ವಲ್ಪ ಹುರಿದು, ನಾಲ್ಕು ಲೋಟ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಬೇಯಿಸಿ. ಸಾಂಬಾರ ಈರುಳ್ಳಿಯನ್ನು ನೀರು ಹಾಕಿ ಬೇಯಿಸಿಕೊಂಡು, ಅದನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಬೇಯಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...