alex Certify
ಕನ್ನಡ ದುನಿಯಾ       Mobile App
       

Kannada Duniya

ತಿನ್ನುವ ಆಸೆ ಮೂಡಿಸುವ ರಾಗಿ ದೋಸೆ

rag-do

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ.

ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು ಬಳಸಿ ಹಲವು ತಿನಿಸುಗಳನ್ನು ಮಾಡಬಹುದಾಗಿದೆ. ಹೀಗೆ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರಾಗಿ ದೋಸೆಯ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ರಾಗಿ ಹಿಟ್ಟು -1 ಕೆ.ಜಿ., ಉಪ್ಪು -3 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ -4, ಕೊತಂಬರಿ ಸೊಪ್ಪು -1 ಕಟ್ಟು, ಹೆಚ್ಚಿದ ಹಸಿ ಮೆಣಸಿನ ಕಾಯಿ -10 ಗ್ರಾಂ, ಕೊಬ್ಬರಿ ತುರಿ -100 ಗ್ರಾಂ, ಜೀರಿಗೆ -10 ಗ್ರಾಂ, ನೀರು -2 ಲೀಟರ್, ಎಣ್ಣೆ -300 ಗ್ರಾಂ.

ತಯಾರಿಸುವ ವಿಧಾನ:

ಅಗಲವಾದ ಸ್ಟೀಲ್ ಪಾತ್ರೆಗೆ ಒಂದೊಂದೇ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ. ನೀರನ್ನು ಹಾಕಿ ಚೆನ್ನಾಗಿ ಕಲೆಸಿ, ದೋಸೆ ಹಿಟ್ಟು ಮಾಡಿ 30 ನಿಮಿಷ ಹಾಗೆಯೇ ಬಿಡಿ.

ಕಾವಲಿಯನ್ನು ಒಲೆಯ ಮೇಲಿಟ್ಟು ಕಾಯಿಸಿ. ಸೌಟಿನಿಂದ ಹಿಟ್ಟು ತೆಗೆದುಕೊಂಡು ಅಗಲವಾಗಿ ದೋಸೆ ಹಾಕಿರಿ. ಚಮಚದಿಂದ 2 -3 ಸಲ ಎಣ್ಣೆ ಹಾಕಿ ಬೇಯಿಸಿರಿ.

ದೋಸೆ ಎರಡೂ ಬದಿಯಲ್ಲಿ ಬೆಂದ ಬಳಿಕ ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿರಿ. ಬಿಸಿ ಇರುವಾಗಲೇ ಚಟ್ನಿ ಇಲ್ಲವೇ ಚಟ್ನಿ ಪುಡಿಯೊಂದಿಗೆ ಬಡಿಸಿರಿ. ಬೇಕಾದಲ್ಲಿ ಬಿಸಿ ದೋಸೆ ಮೇಲೆ ಬೆಣ್ಣೆ ಹಾಕಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...