alex Certify ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ….?

ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ವಿಶ್ವದಾದ್ಯಂತ ಸೀರೆ ಪ್ರಸಿದ್ಧಿ ಪಡೆದಿದೆ. ಆದ್ರೆ ಭಾರತೀಯ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೀರೆ ಉಡುವವರ ಸಂಖ್ಯೆ ಕಡಿಮೆಯಾಗಿದೆ.

ಸೀರೆ, ನೋಡಲು ಸುಂದರವಾಗಿರದ ಮಹಿಳೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಷ್ಟು ಸುಂದರವಾಗಿರದ ಮಹಿಳೆಗೆ ಸೀರೆಯುಡಿಸಿ ನೋಡಿ. ನಿಮಗೆ ಅದ್ರ ಫಲಿತಾಂಶ ಗೊತ್ತಾಗುತ್ತದೆ.

ಮದುವೆಯಾದ್ಮೇಲೆ ಹುಡುಗಿ ಮತ್ತಷ್ಟು ಸುಂದರವಾಗಿ ಕಾಣ್ತಿದ್ದಾಳೆ ಎಂಬ ಮಾತನ್ನು ನಾವು ಕೇಳಿರ್ತೇವೆ. ಇದಕ್ಕೆ ಒಂದರ್ಥದಲ್ಲಿ ಸೀರೆ ಕೂಡ ಕಾರಣ. ಮದುವೆ ನಂತ್ರ ಹುಡುಗಿಯರು ಸೀರೆಯುಡುವ ಪ್ರಮಾಣ ಹೆಚ್ಚಾಗುತ್ತದೆ. ಸೀರೆಯುಟ್ಟರೆ ಹುಡುಗಿ ಸೌಂದರ್ಯ ದುಪ್ಪಟ್ಟಾಗುತ್ತದೆ ಎಂಬುದು ಗೊತ್ತಾಯ್ತು. ಯಾಕೆ ದುಪ್ಪಟ್ಟಾಗುತ್ತದೆ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ.

ಸಾಮಾನ್ಯವಾಗಿ ಸೀರೆಯುಟ್ಟಾಗ ಹುಡುಗಿ ಫಿಗರ್ ಸ್ಪಷ್ಟವಾಗಿ ಕಾಣುತ್ತದೆ. ದೇಹದ ಆಕರ್ಷಣೆ ಸೀರೆಯಿಂದ ಹೆಚ್ಚಾಗುತ್ತದೆ. ಹಾಗೆ ಸೀರೆಯುಟ್ಟಾಗ ಹುಡುಗಿ ಸಭ್ಯವಾಗಿ ಕಾಣ್ತಾಳೆ. ಆಕೆ ಘನತೆ ಹೆಚ್ಚಾಗುತ್ತದೆ. ಸ್ವಲ್ಪ ಉದ್ದವಾಗಿ ಕೂಡ ಕಾಣ್ತಾಳೆ. ಸೀರೆಯುಟ್ಟಾಗ ಹುಡುಗಿ ಹೆಚ್ಚು ರೆಡಿಯಾಗ್ತಾಳೆ. ಕೈಗೆ ಬಳೆ, ಕುತ್ತಿಗೆಗೆ ಸರ, ಹಣೆಗೆ ಬಿಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಹಾಕಿಕೊಳ್ತಾಳೆ. ಇದು ಆಕೆ ಸೌಂದರ್ಯ ದುಪ್ಪಟ್ಟಾಗಲು ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...