alex Certify ಸ್ಟೈಲಿಶ್ ಲುಕ್ ನೀಡೋ ‘ಸನ್ ಗ್ಲಾಸ್’ ಗಳಿಗೆ ಮಾರು ಹೋಗುವ ಮುನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟೈಲಿಶ್ ಲುಕ್ ನೀಡೋ ‘ಸನ್ ಗ್ಲಾಸ್’ ಗಳಿಗೆ ಮಾರು ಹೋಗುವ ಮುನ್ನ

ಹದಿಹರೆಯದವರಿಗೆ ಗಾಗಲ್ಸ್ ಎಂದರೆ ಅಚ್ಚುಮೆಚ್ಚು. ಗ್ಲಾಮರ್ ನೀಡುವ ಗಾಗಲ್ಸ್ ಧರಿಸಿ ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸನ್ ಗ್ಲಾಸ್ ಖರೀದಿಸುತ್ತಾರೆ. ಬಿಸಿಲಿನಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸೆಲೆಬ್ರಿಟಿಗಳನ್ನು ಅನುಕರಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣ ಬಣ್ಣದ ಕನ್ನಡಕಗಳಿಗೆ ಮಾರು ಹೋಗುತ್ತಿದ್ದಾರೆ.

ದುಂಡಗಿನ ಆಕಾರ, ಆಯತಾಕಾರ, ಚೌಕಾಕಾರ ಹೀಗೆ ವಿವಿಧ ವಿನ್ಯಾಸದ ಫ್ರೇಮ್ ಹೊಂದಿರುವ ಗಾಗಲ್ಸ್ ಯುವಕ- ಯುವತಿಯರಿಗೆ ಡಿಫರೆಂಟ್ ಲುಕ್ ನೀಡುತ್ತವೆ. ತಮ್ಮ ಮುಖಕ್ಕೆ ಹೊಂದುವಂತಹ ಗಾಗಲ್ಸ್ ಆಯ್ಕೆಗೆ ಗಮನ ನೀಡಬೇಕಾಗುತ್ತದೆ.

ಸೆಲೆಬ್ರಿಟಿಗಳೂ ಧರಿಸುವ ಕನ್ನಡಕವನ್ನೇ ಹೋಲುವ ತೀರಾ ಕಡಿಮೆ ಬೆಲೆಯ ನಕಲಿ ಗಾಗಲ್ಸ್ ಕೂಡಾ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಗುಣಮಟ್ಟ ಇಲ್ಲದ ಅಂತಹ ಕನ್ನಡಕಗಳನ್ನು ಬಹಳ ಹೊತ್ತು ಧರಿಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...