alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸುದ್ದಿ: ಇಂದೂ ಏರಿಕೆಯಾಯ್ತು ಬಂಗಾರ, ಬೆಳ್ಳಿ ಬೆಲೆ

ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆ ಏರಿಕೆ ಕಾಣ್ತಿದೆ. ಶನಿವಾರ, ಸೋಮವಾರದ ನಂತ್ರ ಮಂಗಳವಾರ ಕೂಡ ಬಂಗಾರದ ಬೆಲೆ ಏರಿದೆ. ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆಯಲ್ಲಿ 210 ರೂಪಾಯಿ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಆಭರಣ ಮಾರುಕಟ್ಟೆಯಲ್ಲಿ ಮಂಗಳವಾರ ಬಂಗಾರದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 31,610 ರೂಪಾಯಿಯಾಗಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಹೆಚ್ಚಳವಾಗಿದೆ. ಮಂಗಳವಾರ ಬೆಳ್ಳಿ 20 ರೂಪಾಯಿ ಏರಿಕೆ ಕಂಡು ಕಿಲೋಗ್ರಾಂ ಬೆಳ್ಳಿ ಬೆಲೆ 37,700 ರೂಪಾಯಿಗೆ ಬಂದು ನಿಂತಿದೆ.

ಜಾಗತಿಕ ಮಾರುಕಟ್ಟೆಯಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಿನ ಬೇಡಿಕೆ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಸಿಂಗಾಪುರದಲ್ಲಿ ಇಂದು ಬಂಗಾರದ ಬೆಲೆ ಇಳಿದಿದೆ. ಶೇಕಡಾ 0.38ರಷ್ಟು ಇಳಿಕೆ ಕಂಡು ಪ್ರತಿ ಔನ್ಸ್ ಚಿನ್ನದ ಬೆಲೆ 1,196.50 ಡಾಲರ್ ಆಗಿದೆ. ಬೆಳ್ಳಿ ಕೂಡ ಶೇಕಡಾ 0.53ರಷ್ಟು ಇಳಿಕೆ ಕಂಡು ಪ್ರತಿ ಔನ್ಸ್ 14.09 ಡಾಲರ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...