alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣುಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು

gowri habba

ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ ಕೊಡಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ತವರುಮನೆಗೆ ಬರಮಾಡಿಕೊಂಡು ಗೌರಿಹಬ್ಬವನ್ನು ಆಚರಿಸಲಾಗುತ್ತದೆ.

ಶ್ರಾವಣಮಾಸ ಹಾಗೂ ಗೌರಿಹಬ್ಬವೆಂದರೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಶ್ರಾವಣಮಾಸದಲ್ಲಿ ವಿವಿಧ ವ್ರತ, ಪೂಜೆ ಕೈಗೊಳ್ಳುವ ಹೆಣ್ಣುಮಕ್ಕಳು ಗೌರಿಹಬ್ಬದ ದಿನ ಗೌರಿಯನ್ನು ಪೂಜಿಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರು ಮನೆಗೆ ಬಂದ ಸಂದರ್ಭದಲ್ಲಿ ಮನೆಯಲ್ಲಿ ಪೂಜೆ ಸಲ್ಲಿಸಿ ಹೊಸ ಮೊರದಲ್ಲಿ ಬಾಗಿನ ಇಟ್ಟುಕೊಂಡು ಗೌರಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ಶಿವನ ಪತ್ನಿ ಗೌರಿ ತವರುಮನೆಗೆ ಅಂದರೆ ಭೂಲೋಕಕ್ಕೆ ಬಂದಾಗ ಇಲ್ಲಿ ಮಳೆ, ಬೆಳೆ ಚೆನ್ನಾಗಿರಲಿ. ತವರುಮನೆ ಸಮೃದ್ಧಿಯಿಂದ ಬೆಳಗಲಿ ಎಂದು ಹಾರೈಸುತ್ತಾಳೆ. ಹಾಗಾಗಿ ತವರುಮನೆಗೆ ಬರುವ ಹೆಣ್ಣುಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅವರು ಸಂತೋಷದಿಂದ ತವರನ್ನು ಹರಸಿದರೆ ತವರು ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ.

ಗೌರಿಹಬ್ಬದ ದಿನ ಗೌರಿಯ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಹೆಣ್ಣುಮಕ್ಕಳೆಲ್ಲಾ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ. ಗೌರಿ ಮೂರ್ತಿಯನ್ನು ಪೂಜಿಸಿದ ನಂತರ ನೀರಿನಲ್ಲಿ ವಿಸರ್ಜಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...