alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಂದು ಪೊರಕೆ ಖರೀದಿ ಮಾಡಿದ್ರೆ ಶುಭ

ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದೇ ಸ್ಥಾನವಿದೆ. ಹಾಗೆ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೂ ಮಹತ್ವದ ಸ್ಥಾನ ನೀಡಲಾಗಿದೆ. ದೀಪಾವಳಿ ದಿನ ಪೊರಕೆ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಪೊರಕೆ, ಮನೆಯ ಒಳಗಿರುವ ಎಲ್ಲ ನಕಾರಾತ್ಮಕ ಶಕ್ತಿ ಹಾಗೂ ದರಿದ್ರವನ್ನು ದೂರ ಮಾಡುತ್ತದೆ.

ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ವಿಶೇಷವಾಗಿ ಹೇಳಲಾಗಿದೆ. ಪೊರಕೆಗೆ ಅವಮಾನ ಮಾಡಿದ್ರೆ ದೇವಿ ಲಕ್ಷ್ಮಿ ಮುನಿಸಿಕೊಳ್ತಾಳೆ. ದೀಪಾವಳಿ ಸಂದರ್ಭದಲ್ಲಿಯೊಂದೇ ಅಲ್ಲ ಎಲ್ಲ ಸಮಯದಲ್ಲಿಯೂ ಪೊರಕೆಯನ್ನು ಒದೆಯಬಾರದು.

ಪೊರಕೆಯನ್ನು ಎಂದೂ ತೆರೆದ ಸ್ಥಳದಲ್ಲಿ ಇಡಬಾರದು. ಇದು ಅಪಶಕುನವೆಂದು ಭಾವಿಸಲಾಗಿದೆ. ಮರೆತೂ ಮುಖ್ಯ ದ್ವಾರದ ಬಳಿ ಪೊರಕೆಯನ್ನು ಇಡಬಾರದು. ಸದಾ ಪೊರಕೆಯನ್ನು ಮರೆಯಲ್ಲಿಡಬೇಕು.

ಲಕ್ಷ್ಮಿಗೆ ನೀಡುವ ಗೌರವವನ್ನು ಪೊರಕೆಗೆ ನೀಡಬೇಕು. ಪೊರಕೆಯನ್ನು ನೆಲಕ್ಕೆ ನಿಲ್ಲಿಸಿಡಬಾರದು. ಯಾವಾಗ್ಲೂ ಅದನ್ನು ನೇತು ಹಾಕಬೇಕು.

ಹಾಳಾದ ಪೊರಕೆಯನ್ನು ಎಂದೂ ಸುಡಬಾರದು. ಶನಿವಾರ ಮಾತ್ರ ಹೊಸ ಪೊರಕೆಯನ್ನು ಖರೀದಿ ಮಾಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...