ಬೇಸಿಗೆ ಹತ್ತಿರ ಬರ್ತಿದ್ದಂತೆ ಎಳ ನೀರಿಗೆ ಬೇಡಿಕೆ ಹೆಚ್ಚಾಗುತ್ತದೆ. ಬೇಸಿಗೆ ಬಿಸಿಲಿಗೆ ಎಳ ನೀರು ಸೇವನೆ ಹಿತವೆನಿಸುತ್ತದೆ. ಎಳ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಳಗಿನ ವೇಳೆ ಎಳನೀರು ಕುಡಿದ್ರೆ ಮತ್ತಷ್ಟು ಲಾಭವಿದೆ.
ತೆಂಗಿನಕಾಯಿ ಕಾರ್ಬೋಹೈಡ್ರೇಟ್ ನ ಉತ್ತಮ ಮೂಲ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ರಕ್ಷಿಸುತ್ತದೆ.
ಪ್ರತಿ ದಿನ ಬೆಳಿಗ್ಗೆ ವ್ಯಾಯಾಮದ ನಂತ್ರ ಎಳನೀರು ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಎಳನೀರಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಯಿರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಅತಿರಕ್ತದೊತ್ತಡವನ್ನು ಎಳನೀರು ನಿಯಂತ್ರಿಸುತ್ತದೆ. ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೇಸಿಯಂಗಳು ಎಳನೀರಿನಲ್ಲಿರುವುದ್ರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.
ಅನೇಕ ಜನರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿರ್ಜಲೀಕರಣ. ಮೈಗ್ರೇನ್ ಕಾಡಿದ ವೇಳೆ ಎಳನೀರು ಕುಡಿಯಬೇಕು. ಇದು ಎಲೆಕ್ಟ್ರೋಲೈಟ್ ಪೂರೈಸಿ, ದೇಹದ ನೀರಿನ ಮಟ್ಟವನ್ನು ಹೆಚ್ಚಿಸಿ ತಲೆನೋವು ಕಡಿಮೆ ಮಾಡುತ್ತದೆ.