ಚುಮು ಚುಮು ಚಳಿ ಶುರುವಾಗಿದೆ. ಚಳಿಗಾಲದಲ್ಲಿ ತಣ್ಣನೆಯ ಗಾಳಿ ಹಾಗೂ ಒಣ ಹವೆ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮ ಒಡೆದು ಉರಿ, ತುರಿಕೆ, ಕಿರಿಕಿರಿಯುಂಟಾಗುತ್ತದೆ.
ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಬೇಕಾಗುತ್ತದೆ. ಈ ಋತುವಿನಲ್ಲಿ ಉಳಿದ ಕ್ರೀಂ ಗಳಿಗಿಂತ ತೆಂಗಿನ ಎಣ್ಣೆ, ಚರ್ಮವನ್ನು ಮೃದುಗೊಳಿಸಿ, ಕೋಮಲ ತ್ವಚೆ ಪಡೆಯಲು ನೆರವಾಗುತ್ತದೆ.
ಚಳಿಗಾಲದಲ್ಲಿ ರಾತ್ರಿ ಸ್ವಲ್ಪ ತೆಂಗಿನ ಎಣ್ಣೆಯನ್ನು ತುಟಿಗಳಿಗೆ ಹಚ್ಚಿ ಮಲಗಿ. ಒರಟಾಗಿದ್ದ ತುಟಿಗಳು ಒಂದು ರಾತ್ರಿಯೊಳಗೆ ಮೃದುವಾಗುತ್ತದೆ. ಲಿಪ್ ಬಾಮ್ ರೂಪದಲ್ಲಿ ನೀವು ತೆಂಗಿನ ಎಣ್ಣೆಯನ್ನು ಬಳಸಬಹುದಾಗಿದೆ.
ಮೇಕಪ್ ತೆಗೆಯಲು ಅಗ್ಗದ ಹಾಗೂ ಸುಲಭದ ಕ್ರೀಮ್ ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯಿಂದ ಮೇಕಪ್ ತೆಗೆದಲ್ಲಿ ಮೇಕಪ್ ನ ಕೆಮಿಕಲ್ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಜೊತೆಗೆ ಚರ್ಮ ಕೋಮಲವಾಗುತ್ತದೆ.
ಶುಷ್ಕ ಗಾಳಿಯ ಭಯಕ್ಕೆ ಅನೇಕರು ಚಳಿಗಾಲದಲ್ಲಿ ಮನೆಯಿಂದ ಹೊರ ಹೋಗಲು ಹೆದರ್ತಾರೆ. ಚಳಿಗಾಲದ ಗಾಳಿಗೆ ಭಯಪಡುವ ಅಗತ್ಯವಿಲ್ಲ. ಮನೆಯಿಂದ ಹೊರ ಬೀಳುವ ಮೊದಲು ಮುಖ, ಕೈ-ಕಾಲಿಗೆ ತೆಂಗಿನ ಎಣ್ಣೆ ಸವರಿಕೊಂಡು ಹೋದ್ರೆ ನಿಮ್ಮ ಚರ್ಮ ಶುಷ್ಕವಾಗುವುದಿಲ್ಲ.
ತೆಂಗಿನ ಎಣ್ಣೆಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಹಚ್ಚಿಕೊಳ್ಳುವುದ್ರಿಂದ ಚರ್ಮದ ಬಣ್ಣ ಬದಲಾಗುತ್ತದೆ. ಜೊತೆಗೆ ಕಪ್ಪು ಕಲೆಗಳು ಮಾಯವಾಗುತ್ತವೆ. ಮೊಣಕೈ, ಮೊಣಕಾಲಿನ ಕಪ್ಪು ಕಲೆ ಹೋಗಲಾಡಿಸಲು ಇದು ಒಳ್ಳೆಯ ಔಷಧಿ.