HomeBusinessBREAKING :ಆನ್‌ಲೈನ್ ಫುಡ್ ಪ್ರಿಯರಿಗೆ ಝೊಮ್ಯಾಟೊ ಪ್ಲಾಟ್‌ಫಾರ್ಮ್ ಶಾಕ್: ಪ್ರತಿ ಆರ್ಡರ್ ಮೇಲೆ ಶುಲ್ಕ 2.40 ರೂ....

BREAKING :ಆನ್‌ಲೈನ್ ಫುಡ್ ಪ್ರಿಯರಿಗೆ ಝೊಮ್ಯಾಟೊ ಪ್ಲಾಟ್‌ಫಾರ್ಮ್ ಶಾಕ್: ಪ್ರತಿ ಆರ್ಡರ್ ಮೇಲೆ ಶುಲ್ಕ 2.40 ರೂ. ಹೆಚ್ಚಳ

ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ದೇಶದ ಪ್ರಮುಖ ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೊ (Zomato) ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು (Platform Fee) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಪ್ರತಿ ಆರ್ಡರ್ ಮೇಲೆ ಈಗ ನೀವು ಸುಮಾರು 17.58 ರೂಪಾಯಿ (ಜಿಎಸ್‌ಟಿ ಸೇರಿ) ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಎಷ್ಟು ಏರಿಕೆಯಾಗಿದೆ?

ಝೊಮ್ಯಾಟೊ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಪ್ರತಿ ಆರ್ಡರ್‌ಗೆ ವಿಧಿಸುವ ಶುಲ್ಕದಲ್ಲಿ 2.40 ರೂಪಾಯಿ ಏರಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳೆಯ ದರ: 12.50 ರೂ. (ಜಿಎಸ್‌ಟಿ ಹೊರತುಪಡಿಸಿ)

ಹೊಸ ದರ: 14.90 ರೂ. (ಜಿಎಸ್‌ಟಿ ಹೊರತುಪಡಿಸಿ)

ತೆರಿಗೆಗಳನ್ನು ಸೇರಿಸಿದ ನಂತರ, ಝೊಮ್ಯಾಟೊದ ಪ್ರಬಲ ಪ್ರತಿಸ್ಪರ್ಧಿ ಸ್ವಿಗ್ಗಿ (Swiggy) ಪ್ರಸ್ತುತ ಪ್ರತಿ ಆರ್ಡರ್‌ಗೆ 14.99 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ. ಸೆಪ್ಟೆಂಬರ್ 2025 ರ ನಂತರ ನಡೆದ ಮತ್ತೊಂದು ಸುತ್ತಿನ ಬೆಲೆ ಏರಿಕೆ ಇದಾಗಿದೆ.

ಬೆಲೆ ಏರಿಕೆಗೆ ಅಸಲಿ ಕಾರಣಗಳೇನು?

ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಏರುತ್ತಿರುವುದು ವಿತರಣಾ ಕಾರ್ಯಾಚರಣೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಝೊಮ್ಯಾಟೊ ಈ ನಿರ್ಧಾರ ಕೈಗೊಂಡಿದೆ. 2023ರಲ್ಲಿ ಕೇವಲ 2 ರೂಪಾಯಿಯಿಂದ ಆರಂಭವಾದ ಈ ಪ್ಲಾಟ್‌ಫಾರ್ಮ್ ಶುಲ್ಕ ಈಗ 15 ರೂಪಾಯಿಯ ಸನಿಹಕ್ಕೆ ಬಂದಿದೆ. ಕಂಪನಿಯ ಪ್ರಕಾರ, ಇದು ದೈನಂದಿನ ವ್ಯವಹಾರದ ಸಾಮಾನ್ಯ ಪ್ರಕ್ರಿಯೆ” (Routine Business Matter) ಆಗಿದೆ.

ಸ್ವಿಗ್ಗಿ ವರ್ಸಸ್ ಝೊಮ್ಯಾಟೊ:

ಝೊಮ್ಯಾಟೊದ ಪ್ರಬಲ ಪ್ರತಿಸ್ಪರ್ಧಿ ಸ್ವಿಗ್ಗಿ ಪ್ರಸ್ತುತ ಜಿಎಸ್‌ಟಿ ಸೇರಿ ಪ್ರತಿ ಆರ್ಡರ್‌ಗೆ 14.99 ರೂ. ಶುಲ್ಕ ವಿಧಿಸುತ್ತಿದೆ. ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಧಿಸಲು ಎರಡೂ ಕಂಪನಿಗಳು ಸರಿಸುಮಾರು ಒಂದೇ ರೀತಿಯ ಬೆಲೆ ತಂತ್ರವನ್ನು ಅನುಸರಿಸುತ್ತಿವೆ.

ರಾಪಿಡೊದಿಂದ ಹೊಸ ಸವಾಲು

ಒಂದೆಡೆ ಝೊಮ್ಯಾಟೊ ಬೆಲೆ ಏರಿಕೆ ಮಾಡುತ್ತಿದ್ದರೆ, ಮತ್ತೊಂದೆಡೆ ಅರ್ಬನ್ ಮೊಬಿಲಿಟಿ ಸ್ಟಾರ್ಟ್ಅಪ್ ರಾಪಿಡೊ (Rapido) ಬೆಂಗಳೂರಿನಲ್ಲಿ ತನ್ನದೇ ಆದ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಿದೆ. ವಿಶೇಷವೆಂದರೆ, ವಿತರಣಾ ಶುಲ್ಕವನ್ನು ಹೊರತುಪಡಿಸಿ ಗ್ರಾಹಕರಿಂದ ಯಾವುದೇ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಕಂಪನಿ ಘೋಷಿಸಿದೆ. ಇದು ಝೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ದೊಡ್ಡ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ.


For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular