HomeKarnatakaBIG NEWS : ಚಿಕ್ಕಬಳ್ಳಾಪುರದಲ್ಲಿ 'ಝೀಕಾ ವೈರಸ್' ಪತ್ತೆ ಹಿನ್ನೆಲೆ : ರಾಜ್ಯ ಸರ್ಕಾರದಿಂದ...

BIG NEWS : ಚಿಕ್ಕಬಳ್ಳಾಪುರದಲ್ಲಿ ‘ಝೀಕಾ ವೈರಸ್’ ಪತ್ತೆ ಹಿನ್ನೆಲೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಚಿಕ್ಕಬಳ್ಳಾಪುರದಲ್ಲಿ: ಚಿಕ್ಕಬಳ್ಳಾಪುರದ ಝೀಕಾ ವೈರಸ್ ಪತ್ತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದೆ.

ಏನಿದೆ ಮಾರ್ಗಸೂಚಿಯಲ್ಲಿ..?

* ಈಡಿಸ್ ಸೊಳ್ಳೆಗಳಿಂದ ಹಬ್ಬುವ ವೈರಸ್ ಇದಾಗಿದೆ.
*ಜನರು ತಮ್ಮ ಪರಿಸರವನ್ನು ಸೊಳ್ಳೆ ಮುಕ್ತವಾಗಿರಿಸಿ.
*ಸೌಮ್ಯ ಲಕ್ಷಣವಿರುವ ಸೋಂಕು ಇದು, ಸಾವಿನ ಸಾಧ್ಯತೆ ಕಮ್ಮಿ.
*ಇದಕ್ಕೆ ನಿರ್ದಿಷ್ಟ ಲಕ್ಷಣವಿಲ್ಲ, ಆದರೆ ನಿರ್ಲಕ್ಷ್ಯ ಬೇಡ. ವೈದ್ಯರಿಂದ ಸೂಕ್ತವಾದ ಚಿಕಿತ್ಸೆ ಪಡೆಯಿರಿ.
*ಝೀಕಾ ವೈರಸ್ ನಿಂದ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು.
*ಕಣ್ಣು ಕೆಂಪಾಗುವುದು, ತಲೆನೋವು, ಮೈ ಕೈ ನೋವು, ಜ್ವರ ಬರುತ್ತದೆ.
*ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.
*ಇಂತಹ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
*ಮನೆ ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡಲಿದ್ದಾರೆ.
*ವೈರಸ್ ಪತ್ತೆಯಾದ 5 ಕಿ.ಮೀ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಝೀಕಾ ವೈರಸ್ ಹೊಂದಿರುವ ಸೊಳ್ಳೆಗಳನ್ನು ಈಡಿಸ್ ಸೊಳ್ಳೆಗಳು ಎಂದು ಕರೆಯಲಾಗುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಈಡಿಸ್ ಸೊಳ್ಳೆಯ ಕಡಿತದಿಂದ ಝಿಕಾ ವೈರಸ್ ಹರಡಬಹುದು. ಈ ಸೊಳ್ಳೆ ಕಡಿತದ ಮೂಲಕ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತಹ ಸೋಂಕುಗಳು ಸಹ ಹರಡಬಹುದು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular