HomeLatest Newsಚಂಡೀಗಢದಲ್ಲಿ ಇಡಿ ದಾಳಿ ವೇಳೆ ರಸ್ತೆಗೆ ಬಿದ್ದ 500 ರೂ. ನೋಟುಗಳ ಕಂತೆ: ವಿಡಿಯೋ ವೈರಲ್

ಚಂಡೀಗಢದಲ್ಲಿ ಇಡಿ ದಾಳಿ ವೇಳೆ ರಸ್ತೆಗೆ ಬಿದ್ದ 500 ರೂ. ನೋಟುಗಳ ಕಂತೆ: ವಿಡಿಯೋ ವೈರಲ್

ಚಂಡೀಗಢ: ಸಿನಿಮಾ ದೃಶ್ಯವನ್ನೂ ಮೀರಿಸುವಂತಹ ಹೈ-ವೋಲ್ಟೇಜ್ ಡ್ರಾಮಾವೊಂದು ಚಂಡೀಗಢ ಮತ್ತು ಮೊಹಾಲಿಯಲ್ಲಿ ನಡೆದಿದೆ. ಹೈಪ್ರೊಫೈಲ್ ಬಿಲ್ಡರ್‌ಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಿಂಚಿನ ದಾಳಿ ನಡೆಸುತ್ತಿದ್ದಂತೆ, ಗಾಬರಿಯಾದ ಆರೋಪಿಗಳು ಸಿಕ್ಕಿಬೀಳುವ ಭೀತಿಯಿಂದ ಲಕ್ಷಾಂತರ ಹಣವಿದ್ದ ಬ್ಯಾಗ್‌ಗಳನ್ನು ಕಿಟಕಿಯಿಂದ ಹೊರಕ್ಕೆ ಎಸೆದಿದ್ದಾರೆ

9ನೇ ಮಹಡಿಯಿಂದ ಕೆಳಕ್ಕೆ ಬಿದ್ದ ನೋಟುಗಳ ಕಂತೆ

ಗುರುವಾರ ಬೆಳ್ಳಂಬೆಳಗ್ಗೆ ಮೊಹಾಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆಗೆ ಮುಂದಾದರು. ಈ ವೇಳೆ 9ನೇ ಮಹಡಿಯ ಫ್ಲ್ಯಾಟ್‌ನಿಂದ 500 ರೂಪಾಯಿ ಮುಖಬೆಲೆಯ ನೋಟುಗಳಿದ್ದ ಎರಡು ಬ್ಯಾಗ್‌ಗಳನ್ನು ರಸ್ತೆಗೆ ಎಸೆಯಲಾಯಿತು. ಬ್ಯಾಗ್ ಕೆಳಗೆ ಬೀಳುತ್ತಿದ್ದಂತೆ ನೋಟುಗಳ ಕಂತೆಗಳು ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ಕಂಡ ಸ್ಥಳೀಯರು ಒಂದು ಕ್ಷಣ ದಂಗಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆಗೆ ಬಿದ್ದಿದ್ದ ಬ್ಯಾಗ್‌ಗಳನ್ನು ತಕ್ಷಣವೇ ವಶಕ್ಕೆ ಪಡೆದ ಅಧಿಕಾರಿಗಳು, ಸರಿಸುಮಾರು 25 ಲಕ್ಷ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.ರಸ್ತೆಗೆ ಬಿದ್ದಿದ್ದ ಬ್ಯಾಗ್‌ಗಳಲ್ಲಿ ಸರಿಸುಮಾರು 25 ಲಕ್ಷ ರೂಪಾಯಿ ನಗದು ಇತ್ತು ಎಂದು ಅಂದಾಜಿಸಲಾಗಿದೆ. ಇದರ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಈ ದಾಳಿಯು ಮೊಹಾಲಿ ನಗರಾಭಿವೃದ್ಧಿ ಪ್ರಾಧಿಕಾರದ (GMADA) ಭೂಬಳಕೆ ಪರವಾನಗಿ (CLU) ಹಗರಣಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಭೂಮಿಯ ಬಳಕೆ ಬದಲಾಯಿಸುವ ಹೆಸರಿನಲ್ಲಿ ಸಾರ್ವಜನಿಕರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಈ ಬಿಲ್ಡರ್‌ಗಳ ಮೇಲಿದೆ.ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಚಂಡೀಗಢ ಮತ್ತು ಮೊಹಾಲಿಯ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಅಕ್ರಮ ಹಣಕಾಸು ವರ್ಗಾವಣೆಯ ಮಾಹಿತಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಘಟನೆಯು ಪಂಜಾಬ್ ಮತ್ತು ಚಂಡೀಗಢದ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular