HomeAutoWatch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್

Watch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್

ವಿಲಕ್ಷಣವಾದ ಮಾರ್ಕೆಟಿಂಗ್ ಸ್ಟಂಟ್‌ನಲ್ಲಿ ಬರೋಬ್ಬರಿ 3 ಕೋಟಿ ಮೊತ್ತದ ದುಬಾರಿ ಕಾರನ್ನು ನಜ್ಜುಗುಜ್ಜು ಮಾಡಲಾಗಿದೆ.

ಜಾಹೀರಾತಿಗಾಗಿ ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ಬಿಳಿ ಲ್ಯಾಂಬೊರ್ಗಿನಿ ಉರಸ್ ಎಸ್‌ಯುವಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ.

ಇಡೀ ಘಟನೆಯನ್ನು ಸೆರೆಹಿಡಿದಿದ್ದಾರೆ. ಭಾರತದಲ್ಲಿ 3.15 ಕೋಟಿ ರೂಪಾಯಿ ಆರಂಭಿಕ ಬೆಲೆಯನ್ನು ಹೊಂದಿರುವ ಅಲ್ಟ್ರಾ-ಐಷಾರಾಮಿ ಕಾರನ್ನು ಮಿಖಾಯಿಲ್ ಲಿಟ್ವಿನ್ ಅವರ ಎನರ್ಜಿ ಡ್ರಿಂಕ್ ಬ್ರ್ಯಾಂಡ್, ಲಿಟ್ ಎನರ್ಜಿ ಪ್ರಚಾರಕ್ಕಾಗಿ ತುಂಡು ತುಂಡು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಟ್ವಿನ್ ಯೂಟ್ಯೂಬ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪ್ರಯತ್ನದ ಬಗ್ಗೆ ಭಿನ್ನ ವಿಭಿನ್ನ ಅಭಿಪ್ರಾಯ ವ್ಯಕ್ತವಾಗ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular