HomeIndiaಮೇಕೆ ಕದ್ದ ಆರೋಪ; ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮಾಲೀಕನಿಂದ ಥಳಿತ...!

ಮೇಕೆ ಕದ್ದ ಆರೋಪ; ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮಾಲೀಕನಿಂದ ಥಳಿತ…!

ಹೈದರಾಬಾದ್: ಮೇಕೆ ಕದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಥಳಿಸಿರುವ ಘಟನೆ ತೆಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಂದಮರಿಯಲ್ಲಿ ಈ ಘಟನೆ ನಡೆದಿದ್ದು, ಮೇಕೆ ಕದ್ದಿದ್ದಾರೆ ಎಂದು ಮೇಕೆ ಸಾಕಾಣಿಕೆ ಕೇಂದ್ರದ ಮಾಲೀಕ, ಇಬ್ಬರು ಯುವಕರನ್ನು ಹಿಡಿದು ತಲೆಕೆಳಗಾಗಿ ನೇತು ಹಾಕಿದ್ದು, ಕೆಳಗಡೆ ಹುಲ್ಲಿಗೆ ಬೆಂಕಿ ಹಾಕಿ, ಬಳಿಕ ಯುವಕರನ್ನು ಮನಬಂದಂತೆ ಥಳಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೇಜಾ ಹಾಗೂ ಸಿ.ಕಿರಣ್ ಎಂಬುವವರನ್ನು ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಮೇಕೆ ಸಾಕಾಣಿಕೆ ಕೇಂದ್ರದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular