ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿ ಅಮಾವೀಯ ಘಟನೆ ನಡೆದಿದ್ದು, ಮೂವರು ಯುವಕರು ಕ್ರಿಕೆಟ್ ಬ್ಯಾಟ್ ಮತ್ತು ಕೋಲುಗಳಿಂದ ಬೀದಿ ನಾಯಿಗೆ ಥಳಿಸಿ ಕೊಂದ ಘಟನೆ ನಡೆದಿದೆ.
ನಾಯಿಯ ಮೇಲಿನ ಮಾರಣಾಂತಿಕ ದಾಳಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ರೇಶಮ್ ತಲ್ವಾರ್ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಯಿಯ ಮೇಲೆ ದಾಳಿ ನಡೆದ ಅದೇ ಪ್ರದೇಶದಲ್ಲಿ ತಲ್ವಾರ್ ವಾಸಿಸುತ್ತಿದ್ದಾರೆ.
ಈ ಘಟನೆಯು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ವೀಡಿಯೊದಲ್ಲಿ, ಕ್ರಿಕೆಟ್ ಬ್ಯಾಟ್ ಹಿಡಿದಿದ್ದ ಯುವಕ ಹಾಗೂ ಆತನ ಸಹಚರರು ಕೋಲುಗಳಿಂದ ನಾಯಿಗೆ ಪದೇ ಪದೇ ಹೊಡೆದು ಸಾಯಿಸಿದ್ದಾರೆ.
ಸೋಮವಾರ ರಾತ್ರಿ 8:30 ರ ಸುಮಾರಿಗೆ ಪ್ರಿನ್ಸ್ ಗೌತಮ್, ಕೃಷ್ಣ ಚೌಹಾಣ್ ಮತ್ತು ಅಮನ್ ಎಂದು ಗುರುತಿಸಲ್ಪಟ್ಟ ಯುವಕರು ಕ್ರಿಕೆಟ್ ಬ್ಯಾಟ್, ಕೋಲು ಮತ್ತು ಕಲ್ಲುಗಳಿಂದ ನಾಯಿಯನ್ನು ತೀವ್ರವಾಗಿ ಗಾಯಗೊಳಿಸಿ ಕೊಂದಿದ್ದಾರೆ ಎನ್ನಲಾಗಿದೆ.
📝 बेजुबानों से प्रेम करो उन्हें बंधक न बनाओ, आजादी के अलावा उनके पास और कुछ भी नहीं…!
📸 ये तस्वीर देख मन व्यथित है,नुकीले डंडे और बैट से तीन युवकों ने एक बेजुबान को बेरहमी से पीटा,जिसकी मौके पर ही मौत हो गई…..!#Video_viral
📍लखनऊ (उत्तर प्रदेश) pic.twitter.com/lgdMaASNJd
— Rahul Saini (@JtrahulSaini) August 14, 2024

