HomeUncategorizedBIG NEWS: ಸ್ನೇಹಿತನನ್ನೇ 21 ಬಾರಿ ಇರಿದು ಕೊಂದ ಯುವಕ

BIG NEWS: ಸ್ನೇಹಿತನನ್ನೇ 21 ಬಾರಿ ಇರಿದು ಕೊಂದ ಯುವಕ

ನೆಲಮಂಗಲ: ಒಂದು ಹುಡುಗಿಗಾಗಿ ಇಬ್ಬರು ಯುವಕರ ಕಾದಾಟ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ತಾನು ಪ್ರೀತಿಸಿದ ಯುವತಿಯನ್ನು ಆಕೆಯ ಕುಟುಂಬದವರು ತನ್ನ ಸ್ನೇಹಿತನ ಜೊತೆ ವಿವಾಹ ಮಾಡಲು ನಿಶ್ಚಯಿಸಿದ್ದಕ್ಕೆ ವೇಣುಗೋಪಾಲ್ ಎಂಬ ಯುವಕ, ದರ್ಶನ್ ಎಂಬಾತನನ್ನು ಮತುಕತೆಗೆಂದು ಕರೆದು 21 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆ ಬಳಿಕ ತಿರುಪತಿಗೆ ತೆರಳಿ ಮುಖಚಹರೆ ಗೊತ್ತಾಗದಂತೆ ಗುಂಡುಹೊಡಿಸಿಕೊಂಡು ಬಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವೇಣುಗೋಪಾಲ್ ನನ್ನು ಬಂಧಿಸಿದ್ದಾರೆ.

ರೈಲಿನಲ್ಲಿ ಚುರುಮುರಿ ಮಾರುತ್ತಿದ್ದ ವೇಣುಗೋಪಾಲ್ ಗೊಲ್ಲಹಳ್ಳಿಯ ಯುವತಿಯಿಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಕುಟುಂಬದವರು ವಿವಾಹಕ್ಕೆ ಒಪ್ಪಿರಲಿಲ್ಲ. ಇಬ್ಬರ ಪ್ರೀತಿಗೆ ಅಡ್ದಿಯಾಗಿದ್ದರು. ಯುವತಿಗೆ ದರ್ಶನ್ ಎಂಬಾತನ ಜೊತೆ ವಿವಾಹ ನಿಶ್ಚಯ ಮಾಡಿದ್ದರು. ಇದರಿಂದ ಕೆರಳಿದ ವೇಣುಗೋಪಾಲ್ ದರ್ಶನ್ ನನ್ನು ಮಾತನಾಡಬೇಕ್ರೆಂದು ಕರೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಸದ್ಯ ಬಂಧಿತ ವೇಣುಗೋಪಾಲ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular