ಬೆಂಗಳೂರು: ಸಾಕು ನಾಯಿ ಕಾಣೆಯಾದ ಕಾರಣಕ್ಕೆ ನಾಯಿ ಹುಡುಕಲು ಹೋಗಿದ್ದ ಯುವಕ ರೈಲು ಡಿಕ್ಕಿಯಾಗಿ ಸಾಅವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮುದ್ದಲಿಂಗನಹಳ್ಳಿಯಲ್ಲಿ ನಡೆದಿದೆ.
14 ವರ್ಷದ ಯೋಗೇಂದ್ರ ಮೃತ ಬಾಲಕ. ಎರಡು ದಿನಗಳ ಹಿಂದೆ ಸಾಕು ನಾಯಿ ನಾಪತ್ತೆಯಾಗಿತ್ತು. ಸಾಕು ನಾಯಿ ಕಾಣೆಯಾಗಿರುವುದಕ್ಕೆ ನೊಂದಿದ್ದ ಯುವಕ ನಾಯಿ ಹುಡುಕಲು ಹೋಗಿದ್ದಾನೆ. ಹೀಗೆ ಹೋಗಿದ್ದ ಯುವಕ ರೈಲ್ವೆ ಹಳಿ ದಾಟುವಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಎರಡು ದಿನಗಳಾದಲೂ ಮಗ ಮನೆಗೆ ಬಾರದಿರುವುದಕ್ಕೆ ಗಾಬರಿಯಾದ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಪರಿಶೀಲನೆ ನಡೆಸಿದಾಗ ರೈಲು ಡಿಕ್ಕಿಯಾಗಿ ಯುವಕ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಮಗನನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

