HomeIndiaSHOCKING NEWS: ಮೀನು ಹಿಡಿಯಲು ಹೋದಾಗ ವಿಚಿತ್ರ ಘಟನೆ: ಜೀವಂತ ಮೀನು ಗಂಟಲಲ್ಲಿ ಸಿಲುಕಿ ಯುವಕ...

SHOCKING NEWS: ಮೀನು ಹಿಡಿಯಲು ಹೋದಾಗ ವಿಚಿತ್ರ ಘಟನೆ: ಜೀವಂತ ಮೀನು ಗಂಟಲಲ್ಲಿ ಸಿಲುಕಿ ಯುವಕ ಸಾವು!

ಮೀನು ಹಿಡಿಯಲು ಹೋಗಿದ್ದ ಯುವಕನ ಗಂಟಲಲ್ಲಿ ಜೀವಂತ ಮೀನು ಸಿಲುಕಿ ಯುವಕ ಸಾವನ್ನಪ್ಪಿರುವ ವಿಚಿತ್ರ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಆಲಪ್ಪುಝ ಬಳಿಯ ಕಾಯಂಕುಳಂ ಬಳಿ ಈ ದುರಂತ ಸಂಭವಿಸಿದೆ. ಆದರ್ಶ್ ಅಲಿಯಾಸ್ ಉನ್ನಿ (25) ಮೃತ ಯುವಕ. ಆದರ್ಶ್ ತನ್ನ ಸ್ನೇಹಿತರೊಂದಿಗೆ ಜಮೀನಿನ ಬಳಿಯ ಗದ್ದೆಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ. ಮೀನು ಹಿಡಿಯುತ್ತಿದ್ದ ವೇಳೆ ಮೀನೊಂದು ಆತನ ಬಾಯಿಗೆ ಕಚ್ಚಿಕೊಂಡು ಗಂಟಲೊಳಗೆ ಸಿಲುಕಿಕೊಂಡಿದೆ. ತಕ್ಷಣ ಆತನ ಸ್ನೇಹಿತರು ಯುವಕನನ್ನು ಓಚಿರ ಬಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದಾಗ್ಯೂ ಯುವಕನ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲ. ಯುವಕ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಕಾಯಂಕುಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular