HomeIndiaSHOCKING : ಪ್ರೀತಿಸಿದ ಹುಡ್ಗಿ ಸಿಗಲಿಲ್ಲವೆಂದು 'ಟವರ್'ನಿಂದ ಜಿಗಿದು ಯುವಕ ಆತ್ಮಹತ್ಯೆ : ಭಯಾನಕ ವೀಡಿಯೋ...

SHOCKING : ಪ್ರೀತಿಸಿದ ಹುಡ್ಗಿ ಸಿಗಲಿಲ್ಲವೆಂದು ‘ಟವರ್’ನಿಂದ ಜಿಗಿದು ಯುವಕ ಆತ್ಮಹತ್ಯೆ : ಭಯಾನಕ ವೀಡಿಯೋ ವೈರಲ್ |WATCH VIDEO

ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಬುಧವಾರ (ಫೆಬ್ರವರಿ 11) ಒಂದು ವಿಚಿತ್ರ ಹಾಗೂ ದುರದೃಷ್ಟಕರ ಘಟನೆ ನಡೆದಿದೆ. ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆ ಮಾಡಿಸಬೇಕೆಂದು ಪಟ್ಟು ಹಿಡಿದು 100 ಅಡಿ ಎತ್ತರದ ಮೊಬೈಲ್ ಟವರ್ ಏರಿದ್ದ 18 ವರ್ಷದ ಯುವಕ, ಕೊನೆಗೆ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಯುವಕ ಟವರ್ ಏರಿ ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದನು. ಟವರ್ ಮೇಲಿಂದ ಒಬ್ಬ ಹುಡುಗಿಯ ಹೆಸರನ್ನು ಪದೇ ಪದೇ ಕೂಗುತ್ತಾ, “ನನಗೆ ಅವಳ ಜೊತೆ ಮದುವೆ ಮಾಡಿಸಿ, ಇಲ್ಲದಿದ್ದರೆ ಇಲ್ಲಿಂದ ಜಿಗಿದು ಸಾಯುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದನು.

ವಿಷಯ ತಿಳಿದ ತಕ್ಷಣ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ ಮನವಿ ಮಾಡಿದರು. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಅವನನ್ನು ಒಪ್ಪಿಸಲು ಪ್ರಯತ್ನಿಸಿದರು. ಆದರೆ, ಯುವಕ ಮಾತ್ರ “ಮೊದಲು ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ, ಆಮೇಲೆ ಕೆಳಗೆ ಬರುತ್ತೇನೆ” ಎಂದು ಹಠ ಹಿಡಿದಿದ್ದನು. ಕೊನೆಗೆ ಟವರ್‌ನಿಂದ ಕೆಳಗೆ ಬಿದ್ದ ಯುವಕ ತೀವ್ರವಾಗಿ ಗಾಯಗೊಂಡನು. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಆತ ಮೃತಪಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಿತ್ ರಾಜ್‌ಪೂತ್ (18).ಕನೌಜ್ ಜಿಲ್ಲೆಯ ಪುರಭೋಜ್ ಗ್ರಾಮದ ನಿವಾಸಿ. ಈತ ರಾಜಸ್ಥಾನದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, 15 ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದನು.ಸುಮಿತ್ ತನ್ನ ಸಂಬಂಧಿಕರ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಆದರೆ ಆ ಹುಡುಗಿಯ ಕುಟುಂಬ ಈ ಸಂಬಂಧಕ್ಕೆ ಒಪ್ಪಿರಲಿಲ್ಲ. ಅಷ್ಟೇ ಅಲ್ಲದೆ, ಆ ಹುಡುಗಿ ಮೂರು ದಿನಗಳ ಹಿಂದಷ್ಟೇ ಬೇರೊಬ್ಬನ ಜೊತೆ ವಿವಾಹವಾಗಿದ್ದಳು. ಇದರಿಂದ ಮನನೊಂದ ಸುಮಿತ್ ಈ ನಿರ್ಧಾರ ಕೈಗೊಂಡಿದ್ದ ಎನ್ನಲಾಗಿದೆ.

ಕುಟುಂಬಕ್ಕೆ ಆಸರೆಯಾಗಿದ್ದಸುಮಿತ್:

ಸುಮಿತ್ ತಂದೆ ಮೂರು ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಮನೆಯಲ್ಲಿ ವಿಧವೆ ತಾಯಿ ಮತ್ತು ಮಾನಸಿಕವಾಗಿ ಅಸ್ವಸ್ಥನಾದ ತಮ್ಮನ ಜವಾಬ್ದಾರಿ ಸುಮಿತ್ ಮೇಲಿತ್ತು. ಅವನ ತಂಗಿಗೆ ಐದು ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಇಡೀ ಕುಟುಂಬಕ್ಕೆ ಸುಮಿತ್ ಒಬ್ಬನೇ ಆಧಾರ ಸ್ತಂಭವಾಗಿದ್ದನು. ಈಗ ಅವನ ಸಾವಿನಿಂದ ಆ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular