HomeKarnatakaಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಹೆಚ್ಚಿನ ಹೊರೆ, ಸರ್ಕಾರಿ ನೌಕರರ ಮನವಿ ಏನು?

ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಹೆಚ್ಚಿನ ಹೊರೆ, ಸರ್ಕಾರಿ ನೌಕರರ ಮನವಿ ಏನು?

ಸರ್ಕಾರದ ಯೋಜನೆಯಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಮೊದಲ ನೌಕರ ಗ್ರಾಮ ಆಡಳಿತ ಅಧಿಕಾರಿ (VAO). ಆದರೆ ವಿವಿಧ ಕಾರಣಕ್ಕೆ ಈಗ ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯದ ಒತ್ತಡದಲ್ಲಿ ಸಿಲುಕಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷ ನೇತೃತ್ವದ ನಿಯೋಗ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ಭೇಟಿ ಮಾಡಿತು.

ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಗಿರಿಗೌಡ, ಹಿರಿಯ ಉಪಾಧ್ಯಕ್ಷ ಸುರೇಶ ಶೇಡಶ್ಯಾಳ, ಉಪಾಧ್ಯಕ್ಷ ಡಾ. ನೆಲ್ಕುದ್ರಿ ಸದಾನಂದ ಮುಂತಾದವರ ಜೊತೆ ಸಿ.ಎಸ್.ಷಡಾಕ್ಷರಿ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ-ಯಾವ ವಿಚಾರ ಚರ್ಚೆ: ಈ ಭೇಟಿಯ ಸಮಯದಲ್ಲಿ ಇತ್ತೀಚಿಗೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಪೌತಿ ಖಾತೆ ಆಂದೋಲನದ ಕಾರಣದಿಂದ ಒತ್ತಡ ಹೆಚ್ಚಾಗಿದ್ದು ಈ ಸಂಬಂಧ ಸವಿಸ್ತಾರವಾಗಿ ಚರ್ಚಿಸಲಾಯಿತು.

ವಂಶವೃಕ್ಷ, ಮರಣ ಪ್ರಮಾಣ ಪತ್ರ, ನ್ಯಾಯಾಲಯಗಳ ಆದೇಶದನ್ವಯ ಈ ಹಿಂದಿನ ಇಲಾಖೆ ಸುತ್ತೋಲೆಯಂತೆ ಖಾತೆ ಮಾಡುತ್ತಿದ್ದು, ಇದರಿಂದ ಕಾನೂನಾತ್ಮಕವಾಗಿ ಅನೇಕ ಸಮಸ್ಯೆಗಳು ಅಧಿಕವಾಗುತ್ತಿದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯಾದರೂ ತಾಂತ್ರಿಕ ದೋಷದಿಂದಾಗಿ ಸರಿಯಾದ ಸಮಯಕ್ಕೆ ಕಡತ ವಿಲೇವಾರಿ ಆಗುತ್ತಿಲ್ಲ ಎಂದ ಚರ್ಚಿಸಲಾಯಿತು.

OTP ಸಮ್ಮತಿ ವಿಧಾನಗಳ ಮೂಲಕ ಖಾತೆ ಪದ್ಧತಿ ಮಾಡುವುದರಿಂದ ವಿಳಂಬವಾಗುತ್ತಿದೆ. ಇದಕ್ಕೆ ಸಂಬಂಧಿಸಿದವರು ಸಹಕರಿಸುತ್ತಿಲ್ಲ ಎಂದು ಚರ್ಚೆ ನಡೆಯಿತು.

ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಇತರೆ ಸಂಬಂಧಿತ Field Officer ಗಳ ಮೇಲೆ ಹೆಚ್ಚಾಗಿರುವ ಕಾರ್ಯಭಾರ ಒತ್ತಡ ಕಡಿಮೆ ಮಾಡಲು ಪರಿಹಾರಗಳ ಕುರಿತು ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಲಾಯಿತು.

ಹೊಸ ಖಾತೆ/ ಪೌತಿ ಖಾತೆ ಸಂಬಂಧ ನಿರ್ದಿಷ್ಟ ಕಾರ್ಯಾಚರಣೆ ಮಾರ್ಗಸೂಚಿಗಳನ್ನು (SOP) ರೂಪಿಸುವುದು, ಖಾತೆಗಳ ಸಂಬಂಧ ಹಿಂದಿನ ಸುತ್ತೋಲೆಯಯಲ್ಲಿ ಯಾವುದೇ ಕಾನೂನಾತ್ಮಕ ಅಂಶಗಳು ಇಲ್ಲದೆ ಇರುವುದರಿಂದ ಬದಲಾಗಿ ಅಧಿಕೃತ ಸರ್ಕಾರದ ಅಧಿಸೂಚನೆ ಹೊರಡಿಸುವ ಕುರಿತು ಗಮನ ಸೆಳೆಯಲಾಯಿತು.

ಕಂದಾಯ ಇಲಾಖೆಯಲ್ಲಿ ಗ್ರೇಡ್-2 ತಹಶೀಲ್ದಾರ್ ಮುಂಬಡ್ತಿ ಹಾಗೂ ಕೆಳಹಂತದ ಮುಂಬಡ್ತಿಗಳನ್ನು ಶೀಘ್ರದಲ್ಲಿ ಮಾಡುವುದಾಗಿ ನಿಯೋಗಕ್ಕೆ ಭರವಸೆ ಸಿಕ್ಕಿದೆ. ಈ ಸಂಬಂಧ ಈಗಾಗಲೇ ಸಮಿತಿಯನ್ನು ರಚಿಸಿರುವುದಾಗಿ ತಿಳಿಸಿದ್ದಾರೆ.

ನೌಕರರ ಎಲ್ಲಾ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಪ್ರಧಾನ ಕಾರ್ಯದರ್ಶಿಗಳು, ಪ್ರಸ್ತಾಪಿತ ಅಂಶಗಳೆಲ್ಲವೂ ಅವಶ್ಯಕವಾಗಿದ್ದು ಶೀಘ್ರದಲ್ಲಿ  SOP ರೂಪಿಸಿ ಹಾಗೂ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಸಂಘದಿಂದ ಸಲಹೆಗಳನ್ನು ನೀಡಲು ತಿಳಿಸಿದರು.  ನಿಮ್ಮ ಸಲಹೆಗಳು ಸಕಾರಾತ್ಮಕವಾಗಿದ್ದಲ್ಲಿ ಅದನ್ನು ಸಹ ಪರಿಗಣಿಸುವುದಾಗಿ ಅವರು ನಿಯೋಗಕ್ಕೆ ಭರವಸೆಯನ್ನು ನೀಡಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular