ಕೊಲ್ಲಂ: ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ಕೊಠಡಿಯಲ್ಲಿಯೇ ಇಬ್ಬರು ಯುವತಿಯರು ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕ್ರೀಡಾ ಪ್ರಾಧಿಕಾರದ ಹಾಸ್ಟೇಲ್ ರೂಂ ನಲ್ಲಿ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು 17 ಹಾಗೂ 15 ವರ್ಷದ ಅಪ್ರಾಪ್ತ ವಯಸ್ಸಿನವರು ಎಂದು ಹೇಳಲಾಗುತ್ತಿದೆ. ಮೃತ ಯುವತಿಯರು ಕೋಳಿಕ್ಕೋಡ್ ಹಾಗೂ ತಿರುವನಮ್ತಪುರಂ ನಿವಾಸಿಗಳು
ಇಂದು ಬೆಳಿಗ್ಗೆ ಎಂದಿನಂತೆ ತರಬೇತಿಗೆ ಬಂದಿರಲಿಲ್ಲ. ಇಬ್ಬರೂ ಬಾರದಿರುವುದನ್ನು ಗಮನಿಸಿ ಇತರ ರೂಂ ನ ವಿದ್ಯಾರ್ಥಿನಿಯರು ರೂಮಿನ ಬಾಗಿಲು ಬಡಿದಿದ್ದಾರೆ. ಆದರೂ ಬಾಗಿಲು ತೆರೆದಿಲ್ಲ. ಕರೆದರೂ ಒಳಗಿನಿಂದ ಯಾವುದೇ ಉತ್ತರವೂ ಇಲ್ಲ. ಹಾಸ್ಟೆಲ್ ಅಧಿಕಾರಿಗಳಿಗೆ ಮಾಅಹಿತಿ ನೀಡಿದಾಗ ಅಧಿಅಕರಿಗಳು ಬಂದು ಕೊಠಡಿಯ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಹುಡುಗಿಯರು ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
15 ವರ್ಷದ ಹುಡುಗಿ ಹಾಸ್ಟೆಲ್ ನ ಬೇರೆ ರೂಂ ನಲ್ಲಿದ್ದಳು. ಆದರೆ ಕಳೆದ ರಾತ್ರಿ ಆಕೆ 17 ವರ್ಷದ ಹುಡುಗಿಯ ರೂಂ ಗೆ ಬಂದಿದ್ದಳು. ಇಂದು ಬೆಳಗಿನ ಜಾವ ಹಾಸ್ಟೆಲ್ ನ ಇತರ ವಿದ್ಯಾರ್ಥಿಗಳು ಇಬ್ಬರನ್ನೂ ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 17 ವರ್ಷದವಳು ಅಥ್ಲೆಟಿಕ್ ತರಬೇತಿ ಪಡೆಯುತ್ತಿದ್ದಳು. ಇನ್ನೋರ್ವ ವಿದ್ಯಾರ್ಥಿ ಕಬ್ಬಡ್ಡಿ ಆಟಗಾರ್ತಿಯಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿದ್ದಳು.
ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇಬ್ಬರೂ ಮೊದಲಿನಿಂದಲೂ ಪರಿಚಿತರಾಗಿದ್ದರೇ? ಎಂಬೂದೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

