HomeLatest Newsಈ ಲಿಪ್ಸ್ಟಿಕ್ ಬೆಲೆ ಕೇಳಿದ್ರೆ ದಂಗಾಗ್ತೀರಿ......!

ಈ ಲಿಪ್ಸ್ಟಿಕ್ ಬೆಲೆ ಕೇಳಿದ್ರೆ ದಂಗಾಗ್ತೀರಿ……!

ಹುಡುಗಿಯರ ಅಚ್ಚುಮೆಚ್ಚಿನ ಬ್ಯೂಟಿ ಪ್ರಾಡಕ್ಟ್‌ ನಲ್ಲಿ ಲಿಪ್ಸ್ಟಿಕ್‌ ಮೊದಲ ಸ್ಥಾನದಲ್ಲಿದೆ. ಮನೆಯಿಂದ ಹೊರಗೆ ಬೀಳುವ ವೇಳೆ ಬೇರೆ ಏನನ್ನೂ ಮುಖಕ್ಕೆ ಹಚ್ಚಿಕೊಂಡಿಲ್ಲ ಎಂದರೂ ಲಿಪ್ಸ್ಟಿಕ್‌, ಕಾಡಿಗೆ ಹಚ್ಚುತ್ತಾರೆ ಹುಡುಗಿಯರು. ಮಾರುಕಟ್ಟೆಯಲ್ಲಿ ಬಗೆ ಬಗೆಯ ಲಿಪ್ಸ್ಟಿಕ್‌ ಲಭ್ಯವಿದೆ. ಅನೇಕ ಕಂಪನಿಗಳು ಲಿಪ್ಸ್ಟಿಕ್‌ ತಯಾರಿಸುತ್ತವೆ. ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಇಪ್ಪತ್ತು ರೂಪಾಯಿಗೂ ಲಿಪ್ಸ್ಟಿಕ್‌ ಸಿಗುತ್ತದೆ. ಆದ್ರೆ ದುಬಾರಿ ಲಿಪ್ಸ್ಟಿಕ್‌ ಬೆಲೆ ಎಷ್ಟು ಎಂಬುದು ನಿಮಗೆ ಗೊತ್ತಾ?

ದುಬಾರಿ ಬೆಲೆಯ ಲಿಪ್ಸ್ಟಿಕ್ ಸಾವಿರ ಹೋಗ್ಲಿ ಲಕ್ಷದ ಲೆಕ್ಕದಲ್ಲೂ ಇಲ್ಲ. ಲಿಪ್ಸ್ಟಿಕ್‌ ಖರೀದಿಗೆ ನೀವು ಕೋಟಿ ರೂಪಾಯಿ ನೀಡ್ಬೇಕು. ಹೌದು, ವಿಶ್ವದ ದುಬಾರಿ ಲಿಪ್ಸ್ಟಿಕ್‌ ಎಂದೇ ಕೌಚರ್ ಬ್ಯೂಟಿ ಡೈಮಂಡ್ ಲಿಪ್‌ಸ್ಟಿಕ್ ಹೆಸರು ಪಡೆದಿದೆ. ಇದರ ಬೆಲೆ 93 ಕೋಟಿ ರೂಪಾಯಿ. ಇನ್ನು ಎರಡನೇ ಸ್ಥಾನದಲ್ಲಿ ಗುಏರ್ಲೆನ್‌ ಕಿಸ್‌ ಕಿನ್‌ ಗೋಲ್ಡ್ ಮತ್ತು ಡೈಮಂಡ್ ಲಿಪ್ಸ್ಟಿಕ್‌ ಇದೆ. ಇದರ ಬೆಲೆ 62 ಸಾವಿರ ಡಾಲರ್ ಅಂದರೆ 51 ಲಕ್ಷ 6 ಸಾವಿರ ರೂಪಾಯಿ.

ಬಾಂಡ್ ಸಂಖ್ಯೆ 9 ಮೂರನೇ ಸ್ಥಾನದಲ್ಲಿದೆ. 2019ರಲ್ಲಿ ಶುರುವಾದ ಈ ಬ್ರ್ಯಾಂಡ್‌ ಕಡಿಮೆ ಸಮಯದಲ್ಲೇ ಸುದ್ದಿ ಮಾಡಿದೆ. ಇದ್ರ ಬೆಲೆ 8,649 ಲಕ್ಷ ರೂಪಾಯಿ. ಸಿಸ್ಲಿ ಹೈಡ್ರೇಟೆಡ್ ಲಾಂಗ್ ಲಾಸ್ಟಿಂಗ್ ಲಿಪ್ಸ್ಟಿಕ್ ನಾಲ್ಕನೇ ಸ್ಥಾನದಲ್ಲಿದ್ದು, ಲಾ ಪ್ರೈರೀ ಸೆಲ್ಯುಲರ್ ಲಕ್ಸ್ ಲಿಪ್‌ಸ್ಟಿಕ್ ಐದನೇ ಸ್ಥಾನದಲ್ಲಿದೆ. ಇವೆರಡ ಬೆಲೆ ಕ್ರಮವಾಗಿ 4 ಸಾವಿರ ರೂಪಾಯಿ ಮತ್ತು 3,600 ರೂಪಾಯಿ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular