HomeLatest Newsಸೋನಾಕ್ಷಿ-ಜಹೀರ್ ಲವ್ ಸ್ಟೋರಿ ಮೊದಲೇ ಲೀಕ್ ಆಗಿತ್ತಾ? ಸಲ್ಮಾನ್ ಖಾನ್ ಕೊಟ್ಟಿದ್ದ ಆ ಒಂದು ವಾರ್ನಿಂಗ್...

ಸೋನಾಕ್ಷಿ-ಜಹೀರ್ ಲವ್ ಸ್ಟೋರಿ ಮೊದಲೇ ಲೀಕ್ ಆಗಿತ್ತಾ? ಸಲ್ಮಾನ್ ಖಾನ್ ಕೊಟ್ಟಿದ್ದ ಆ ಒಂದು ವಾರ್ನಿಂಗ್ ಏನು?

ಬಾಲಿವುಡ್‌ನ ಕ್ಯೂಟ್ ಜೋಡಿಗಳ ಪಟ್ಟಿಯಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸದಾ ಮುಂಚೂಣಿಯಲ್ಲಿರುತ್ತಾರೆ. ಇವರಿಬ್ಬರ ಆನ್-ಸ್ಕ್ರೀನ್ ಹಾಗೂ ಆಫ್-ಸ್ಕ್ರೀನ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಇವರಿಬ್ಬರ ಮಧ್ಯೆ ಪ್ರೀತಿ ಚಿಗುರುತ್ತಿದೆ ಎಂಬ ವಿಷಯವನ್ನು ಮೊಟ್ಟಮೊದಲ ಬಾರಿಗೆ ಪತ್ತೆಹಚ್ಚಿದ್ದು ಮತ್ಯಾರೂ ಅಲ್ಲ, ಸ್ವತಃ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಎಂಬ ಸ್ವಾರಸ್ಯಕರ ವಿಷಯ ಈಗ ಬೆಳಕಿಗೆ ಬಂದಿದೆ.

ಇತ್ತೀಚೆಗೆ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಅವರ ‘ಡಬಲ್ ಡೇಟ್’ ಟಾಕ್ ಶೋನಲ್ಲಿ ಭಾಗವಹಿಸಿದ್ದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಮ್ಮ ಪ್ರೀತಿಯ ದಿನಗಳ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಸಲ್ಮಾನ್ ಖಾನ್ ಪತ್ತೆ ಹಚ್ಚಿದ ರಹಸ್ಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ನಡುವಿನ ಪ್ರೇಮದ ವಿಚಾರವನ್ನು ಸಲ್ಮಾನ್ ಖಾನ್ ಹೇಗೆ ಪತ್ತೆಹಚ್ಚಿದರು ಎಂಬುದನ್ನು ಜಹೀರ್ ಇಕ್ಬಾಲ್ ಹಂಚಿಕೊಂಡಿದ್ದಾರೆ. ನಾವು ಸಲ್ಮಾನ್ ಖಾನ್ ಅವರಿಗೆ ನಮ್ಮ ಪ್ರೀತಿಯ ವಿಷಯವನ್ನು ತಿಳಿಸುವ ಮುನ್ನವೇ ಅವರಿಗೆ ಎಲ್ಲವೂ ಅರ್ಥವಾಗಿತ್ತು. ನಮ್ಮಿಬ್ಬರ ನಡವಳಿಕೆಯನ್ನು ನೋಡಿಯೇ ಅವರು ವಿಷಯ ಗ್ರಹಿಸಿದ್ದರು ಎಂದು ಜಹೀರ್ ಹೇಳಿದ್ದಾರೆ.

ಇದಕ್ಕೆ ಧ್ವನಿಗೂಡಿಸಿದ ಸೋನಾಕ್ಷಿ ಸಿನ್ಹಾ, ನಮ್ಮಿಬ್ಬರ ನಡುವೆ ಪ್ರೀತಿ ಇರುವುದನ್ನು ಸಲ್ಮಾನ್ ಖಾನ್ ಗಮನಿಸಿದ್ದರು. ಅವರು ತುಂಬಾ ಬುದ್ಧಿವಂತರಾಗಿದ್ದು, ನಮ್ಮ ನಡುವಿನ ವೈಬ್ಸ್ ಅವರಿಗೆ ಬೇಗನೆ ಅರ್ಥವಾಗಿತ್ತು. ಅವರು ಈ ಬಗ್ಗೆ ಕೇಳಿದಾಗಲೆಲ್ಲಾ ನಾವು ಅಂತಹದ್ದೇನೂ ಇಲ್ಲ ಎಂದು ಸುಳ್ಳು ಹೇಳುತ್ತಿದ್ದೆವು. ಆದರೆ ಒಂದು ದಿನ ಸಲ್ಮಾನ್ ಖಾನ್ ನಮಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದರು ಎಂದಿದ್ದಾರೆ.

ಸಲ್ಮಾನ್ ಖಾನ್ ನೀಡಿದ್ದ ಎಚ್ಚರಿಕೆ ಏನು?

ಸೋನಾಕ್ಷಿ ಅವರ ಪ್ರಕಾರ, ಸಲ್ಮಾನ್ ಖಾನ್ ಇಬ್ಬರನ್ನೂ ಕರೆದು, ನೋಡಿ, ಒಂದಲ್ಲ ಒಂದು ದಿನ ನಿಮ್ಮಿಬ್ಬರ ನಡುವೆ ಬ್ರೇಕಪ್ ಆಗುತ್ತದೆ. ಆಗ ನೀನು ನನ್ನ ಬಳಿ ಬಂದು ಅಳುತ್ತೀಯಾ, ಅವನು ಅಲ್ಲಿ ಅಳುತ್ತಾನೆ. ನನಗೆ ನಿಮ್ಮಿಬ್ಬರ ಮೇಲೂ ಪ್ರೀತಿ ಇದೆ. ಹೀಗಾಗಿ ಆ ಸಮಯದಲ್ಲಿ ನಾನು ಯಾರ ಪರವೂ ನಿಲ್ಲಲು ಸಾಧ್ಯವಿಲ್ಲ ಎಂದು ಗಂಭೀರವಾಗಿ ಹೇಳಿದ್ದರಂತೆ. ಸಲ್ಮಾನ್ ಅವರ ಈ ಮಾತುಗಳನ್ನು ಕೇಳಿ ನಾವಿಬ್ಬರೂ ಶಾಕ್ ಆಗಿದ್ದೆವು ಎಂದು ಸೋನಾಕ್ಷಿ ನೆನಪಿಸಿಕೊಂಡಿದ್ದಾರೆ.

ಅಲ್ಲದೆ, ಒಮ್ಮೆ ಟ್ರೆಕ್ಕಿಂಗ್ ಹೋಗಿದ್ದಾಗ ಸಲ್ಮಾನ್ ಖಾನ್ ನೇರವಾಗಿ ಜಹೀರ್ ಬಳಿ ಬಂದು, ನನಗೆ ಎಲ್ಲವೂ ಕಾಣಿಸುತ್ತಿದೆ ಎಂದು ಹೇಳಿದಾಗ, ಸಲ್ಮಾನ್ ಖಾನ್‌ಗೆ ನಮ್ಮ ಪ್ರೀತಿಯ ವಿಷಯ ಸಂಪೂರ್ಣವಾಗಿ ತಿಳಿದುಹೋಗಿದೆ ಮತ್ತು ಅದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ನಮಗೆ ಮನವರಿಕೆಯಾಯಿತು ಎಂದು ಸೋನಾಕ್ಷಿ ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮೊದಲ ಬಾರಿಗೆ ಭೇಟಿಯಾಗಿದ್ದರು. 2017 ರಿಂದ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಹಲವು ವರ್ಷಗಳ ಕಾಲ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದರು. 2022 ರ ‘ಡಬಲ್ ಎಕ್ಸ್‌ಎಲ್’ ಚಿತ್ರದಲ್ಲೂ ಈ ಜೋಡಿ ಒಟ್ಟಿಗೆ ನಟಿಸಿತ್ತು. ಬಳಿಕ ಜೂನ್ 2024 ರಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಇಬ್ಬರೂ ಸರಳವಾಗಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular