HomeBeautyಮೊಸರಿನಿಂದ ದುಪ್ಪಟ್ಟಾಗುತ್ತೆ ಸೌಂದರ್ಯ

ಮೊಸರಿನಿಂದ ದುಪ್ಪಟ್ಟಾಗುತ್ತೆ ಸೌಂದರ್ಯ

ಮೊಸರು ಹೆಚ್ಚಿನ ಪ್ರಮಾಣದ ಸತು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಮೊಸರನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.

*ಚರ್ಮದ ಆರೋಗ್ಯಕ್ಕಾಗಿ 2 ಚಮಚ ಮೊಸರನ್ನು 1 ಚಮಚ ಜೇನುತುಪ್ಪಕ್ಕೆ ಬೆರೆಸಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಚರ್ಮದ ತೇವಾಂಶ ಹೆಚ್ಚಾಗುತ್ತದೆ. ಹಾಗೇ ಮೊಸರು ಸನ್ ಬರ್ನ್ ನ್ನು, ಕಲೆ, ಶುಷ್ಕ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೊಸರನ್ನು ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.

 *ಕೂದಲಿನ ಆರೋಗ್ಯಕ್ಕಾಗಿ 4 ಚಮಚ ಮೊಸರಿಗೆ 2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆಗಳ ಬಳಿಕ ವಾಶ್ ಮಾಡಿ. ತಲೆಹೊಟ್ಟು ನಿವಾರಿಸಲು ½ ಕಪ್ ಮೊಸರನ್ನು ಕೂದಲಿಗೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಕೂದಲು ಉದರುವುದನ್ನು ತಡೆಯಲು 1 ಮೊಟ್ಟೆಯ ಹಳದಿ ಲೋಳೆಗೆ 2 ಚಮಚ ಮೊಸರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular