ದೇಶೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆ ಇಂದು ಗಗನಕ್ಕೇರಿದ್ದು, ಹೊಸ ದಾಖಲೆಯನ್ನು ಬರೆದಿದೆ. ಸೋಮವಾರ, ಅಂದರೆ ಜನವರಿ 19ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಊಹೆಗೂ ನಿಲುಕದ ಮಟ್ಟಕ್ಕೆ ಜಿಗಿದಿವೆ.ಚಿನ್ನದ ಬೆಲೆ ಗ್ರಾಮ್ಗೆ 175 ರೂ ಏರಿದೆ, ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹1,910 ಹೆಚ್ಚಳವಾಗಿದ್ದರೆ, ಬೆಳ್ಳಿ ಬೆಲೆ ಕೆಜಿಗೆ ₹10,000 ರಷ್ಟು ದುಬಾರಿಯಾಗಿದೆ.1 ಗ್ರಾಂ ಬೆಳ್ಳಿಯ ದರ ಇಂದಿನ ದಿನಾಂಕಕ್ಕೆ ₹305 ಆಗಿದ್ದು, ನಿನ್ನೆ ₹295 ಆಗಿತ್ತು, ಇದರಿಂದ 10 ರೂ. ಏರಿಕೆಯಾಗಿದೆ.
ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತೀಯ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪಿಯನ್ ರಾಷ್ಟ್ರಗಳ ಮೇಲೆ 10% ಹೊಸ ಸುಂಕ (Tariff) ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಕೆರಳಿದ್ದು, ಜಾಗತಿಕ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇಂತಹ ಅನಿಶ್ಚಿತ ಸಮಯದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣ.
ಮಧ್ಯಮ ವರ್ಗದ ಜನರಿಗೆ ಚಿನ್ನ ಈಗ ಕೇವಲ ಕನಸಿನ ಲೋಹವಾಗುತ್ತಿದೆ ಎನ್ನುವುದಕ್ಕೆ ಇಂದಿನ ದರ ಏರಿಕೆಯೇ ಸಾಕ್ಷಿ.
ಇಂದಿನ ದರ ಪಟ್ಟಿ (ಬೆಂಗಳೂರು ಮಾರುಕಟ್ಟೆಯಲ್ಲಿ):
22 ಕ್ಯಾರಟ್ ಚಿನ್ನ (10 ಗ್ರಾಂ): ₹1,33,550
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): ₹1,45,690
ಬೆಳ್ಳಿ (100 ಗ್ರಾಂ): ₹30,500 (1 ಕೆಜಿಗೆ ₹3,05,000 ಗಡಿ ತಲುಪಿದೆ)
ಇತರ ರಾಜ್ಯಗಳಲ್ಲಿ: ತಮಿಳುನಾಡು ಮತ್ತು ಕೇರಳದಲ್ಲಿ ಬೆಳ್ಳಿ ಬೆಲೆ 100 ಗ್ರಾಂಗೆ ₹31,800ರ ವರೆಗೂ ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ (ಜನವರಿ 19) ಬಂಗಾರದ ದರ ಪಟ್ಟಿ
ನಗರದ ಹೆಸರು 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,45,690
ಮುಂಬೈ ₹1,45,690
ನಾಗ್ಪುರ ₹1,45,690
ಕೋಲ್ಕತ್ತಾ ₹1,45,690
ಚೆನ್ನೈ ₹1,46,730 (ಅತಿ ಹೆಚ್ಚು)
ಪಾಟ್ನಾ ₹1,45,740
ಸೂರತ್ ₹1,45,740
ಲಕ್ನೋ ₹1,45,840
ಚಂಡೀಗಢ ₹1,45,840

