ವಿಜಯಪುರ: ನಾನು ಮುಖ್ಯಮಂತ್ರಿಯಾಗಿ ಮೊದಲ ಕ್ಯಾಬಿನೆಟ್ ನಲ್ಲಿಯೇ ಮುಸ್ಲಿಂರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಇಂದು ಹನುಮ ಜಯಂತಿ. ಆಂಜನೇಯನ ಸನ್ನಿಧಾನದ;ಲಿ ನಿಂತು ಹೇಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ನನ್ನನ್ನು ಸೇರಿಸಿಕೊಳ್ಳಿ ಅಂತಾ ಹೇಳಲ್ಲ. ಅವರಾಗಿಯೇ ಅಪ್ಪ-ಮಗನನ್ನು ಕೈಬಿಟ್ಟು ನನ್ನನ್ನು ಬಿಜೆಪಿಗೆ ಬನ್ನಿ ಅಂತಾ ಕರೆಯುತ್ತಾರೆ. ಬಳಿಕ ಸಿಎಂ ಆಗಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ರೀತಿ ರಾಜ್ಯಭಾರ ಮಾಡುತ್ತೇನೆ ಎಂದಿದ್ದಾರೆ.
ಮೊದಲ ಕ್ಯಾಬಿನೇಟ್ ಸಭೆಯಲ್ಲಿಯೇ ಮುಸ್ಲಿಂರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ. ಇವರ ಹೊರತಾಗಿ ಮರಾಠರು, ಬ್ರಾಹ್ಮಣರು, ಕ್ಷತ್ರೀಯರು ಸೇರಿದಂತೆ ಅನೇಕರು ಅಲ್ಪಸಂಖ್ಯಾತರು ಇದ್ದಾರೆ. ಅವರಿಗೆಲ್ಲ ಅಲ್ಪಸಂಖ್ಯಾತ ಸ್ಥಾನಮಾನ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ವೀರಣ್ಣ ಚರಂತಿಮಠ ನನ್ನ ಆತ್ಮೀಯರು. ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನನ್ನು ಪ್ರಚಾರಕ್ಕೆ ಕರೆದಿದ್ದಾರೆ ಅದಕ್ಕಾಗಿ ನಾನು ಚಿರಂತಿಮಠ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

