HomeLatest Newsಮುಂಬೈ ಇಂಡಿಯನ್ಸ್ ಆಡುವ ಅವಕಾಶ ಕೊಡಲಿಲ್ಲ, ಐಪಿಎಲ್‌ನ ಈ ಕೆಟ್ಟ ನಿಯಮ ಪ್ರಪಂಚದಲ್ಲೆಲ್ಲೂ ಇಲ್ಲ; ಅರ್ಜುನ್...

ಮುಂಬೈ ಇಂಡಿಯನ್ಸ್ ಆಡುವ ಅವಕಾಶ ಕೊಡಲಿಲ್ಲ, ಐಪಿಎಲ್‌ನ ಈ ಕೆಟ್ಟ ನಿಯಮ ಪ್ರಪಂಚದಲ್ಲೆಲ್ಲೂ ಇಲ್ಲ; ಅರ್ಜುನ್ ತೆಂಡೂಲ್ಕರ್ ಕಿಡಿ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಸಚಿನ್ ತೆಂಡೂಲ್ಕರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ.

2021ರ ಐಪಿಎಲ್ ಹರಾಜಿನಲ್ಲಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಅರ್ಜುನ್ ತೆಂಡೂಲ್ಕರ್ ಗಾಯದ ಸಮಸ್ಯೆಯಿಂದಾಗಿ ಆ ವರ್ಷ ಟೂರ್ನಿಯಿಂದ ಹೊರಬಿದ್ದಿದ್ದರು. ನಂತರ 2022ರಲ್ಲೂ ಮುಂಬೈ ಇಂಡಿಯನ್ಸ್ ಕ್ಯಾಂಪ್‌ನಲ್ಲಿ ಸ್ಥಾನ ಪಡೆದ ಅರ್ಜುನ್ ತೆಂಡೂಲ್ಕರ್ ಆ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಆಡದೇ ಉಳಿದರು. 2023ರಲ್ಲಿ ಮುಂಬೈ ಪರ 4 ಪಂದ್ಯಗಳಲ್ಲಿ ಕಣಕ್ಕಿಳಿದ ಅರ್ಜುನ್ 3 ವಿಕೆಟ್ ಪಡೆದು ತನ್ನ ಸ್ವಿಂಗ್ ಬೌಲಿಂಗ್‌ನಿಂದ ಗಮನ ಸೆಳೆದಿದ್ದರು.

2024ರಲ್ಲೂ ಮುಂಬೈ ಇಂಡಿಯನ್ಸ್ ತಂಡದಿಂದ ರಿಟೈನ್ ಆದ ಅರ್ಜುನ್ ಆ ವರ್ಷ ಒಂದೇ ಒಂದು ಪಂದ್ಯವನ್ನಾಡುವ ಅವಕಾಶ ಪಡೆದು ಎರಡು ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ 22 ರನ್ ನೀಡಿದ್ದರು. ಹೀಗೆ ಹೆಚ್ಚೇನೂ ಅವಕಾಶ ಸಿಗದ ಕುರಿತು ಅರ್ಜುನ್ ತೆಂಡೂಲ್ಕರ್ ಸಂದರ್ಶನದಲ್ಲಿ ಮಾತನಾಡಿದ್ದು, ‘ಯಾರಿಗೆ ತಾನೇ ಎನಿಸುವುದಿಲ್ಲ ಹೇಳಿ? ಯಾರೂ ಸಹ ಆಟ ಆಡದೇ ಬೆಂಚ್‌ ಕಾಯಲು ಇಚ್ಛಿಸುವುದಿಲ್ಲ. ಆದರೆ ನಾವು ಅವಕಾಶ ಸಿಕ್ಕಾಗ ಚೆನ್ನಾಗಿ ಶ್ರಮಿಸಿ ಒಳ್ಳೆಯ ಪ್ರದರ್ಶನ ನೀಡಬೇಕು’ ಎಂದು ಮುಂಬೈ ಇಂಡಿಯನ್ಸ್‌ನಲ್ಲಿ ಹೆಚ್ಚು ಅವಕಾಶ ಸಿಗದೇ ಬೆಂಚ್ ಕಾಯ್ದಿದ್ದನ್ನು ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಹಲವು ಹಿರಿಯ ಕ್ರಿಕೆಟಿಗರಿಂದ ಭಾರೀ ಟೀಕೆಗೆ ಒಳಗಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಮಾತನಾಡಿರುವ ಅರ್ಜುನ್ ತೆಂಡೂಲ್ಕರ್ ’11 ಆಟಗಾರರನ್ನು ಆರಿಸಿ ಹಾಗೂ ಆಟವನ್ನಾಡಿ. ಏಕೆಂದರೆ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಹಾಗೂ ಇನ್ಯಾವುದೇ ಟಿ ಟ್ವೆಂಟಿ ಲೀಗ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವಿಲ್ಲ. ವೈಯಕ್ತಿಕವಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ವಿರೋಧಿಸುತ್ತೇನೆ’ ಎಂದು ತಿಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular