HomeKarnatakaBIG NEWS: ಉಚ್ಛಾಟನೆ ಬಳಿಕ ಯತ್ನಾಳ್ ಆಕ್ಟೀವ್: ಸಿದ್ದೇಶ್ವರ ದೇಗುಲದ ವಿಶೇಷ ಪೂಜೆ ಸಲ್ಲಿಕೆ; ಕುತೂಹಲ...

BIG NEWS: ಉಚ್ಛಾಟನೆ ಬಳಿಕ ಯತ್ನಾಳ್ ಆಕ್ಟೀವ್: ಸಿದ್ದೇಶ್ವರ ದೇಗುಲದ ವಿಶೇಷ ಪೂಜೆ ಸಲ್ಲಿಕೆ; ಕುತೂಹಲ ಮೂಡಿಸಿದ ನಡೆ

ವಿಜಯಪುರ: ಬಿಜೆಪಿಯಿಂದ ಶಾಸಕ ಯತ್ನಾಳ್ ಉಚ್ಛಾಟನೆ ಮಾಡಿದ ಬಳಿಕ ಯತ್ನಾಳ್ ಫುಲ್ ಆಕ್ಟೀವ್ ಆಗಿದ್ದಾರೆ. ಯುಗಾದಿ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಯತ್ನಾಳ್ ಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಶೈಲಜಾ ಜೊತೆ ಸಿದ್ದೇಶ್ವರ ದೇಗುಲದಲ್ಲಿ ನಡೆದ ಹೋಮ-ಹವನದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದಿಂದ ಉಚ್ಛಾಟನೆಯಾದರೂ ತಮ್ಮ ಕ್ಷೇತ್ರದ ವಿವಿಧ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಸಕ ಯತ್ನಾಳ್, ನಮ್ಮ ಭವಿಷ್ಯ ಉಜ್ವಲವಾಗುವ ದಿನಗಳು ಇಂದಿನಿಂದ ಆರಂಭವಾಗಲಿದೆ. ನಾನಾಗಿಯೇ ಯಾವ ಹಿರಿಯ ನಾಯಕರನ್ನೂ ಭೇಟಿಯಾಗಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular