HomeEntertainmentBIG NEWS: ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ; ರಾಕಿಂಗ್ ಸ್ಟಾರ್ ಯಶ್ 19ನೇ ಚಿತ್ರದ ಟೈಟಲ್...

BIG NEWS: ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ; ರಾಕಿಂಗ್ ಸ್ಟಾರ್ ಯಶ್ 19ನೇ ಚಿತ್ರದ ಟೈಟಲ್ ರಿಲೀಸ್

ಬೆಂಗಳೂರು: ಕೆಜಿಎಫ್-2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು?ಹೇಗಿರಬಹುದು? ಎಂಬ ಅಭಿಮಾನಿಗಳ ಸಾವಿರಾರು ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದೆ. ಯಶ್ ಅಭಿನಯದ ಹೊಸ ಚಿತ್ರದ ಟೈಟಲ್ ಬಿಡುಗಡೆಯಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಚಿತ್ರಕ್ಕೆ ‘ಟಾಕ್ಸಿಕ್’ ಎಂದು ಹೆಸರಿಡಲಾಗಿದ್ದು, ಅದ್ದೂರಿಯಾಗಿ ಇಂದು ಟೈಟಲ್ ಬಿಡುಗಡೆ ಮಾಡಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆವಿಎನ್ ಪ್ರೊಡೆಕ್ಷನ್ ನಲ್ಲಿ ಯಶ್ ಅವರ 19ನೇ ಸಿನಿಮಾ ಟಾಕ್ಸಿಕ್ ಮೂಡಿಬರಲಿದ್ದು, ಟೈಟಲ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಯಶ್ ಅವರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆ ಇಮ್ಮಡಿಯಾಗಿದೆ.

ಕೆಜಿಎಫ್ ಸಿನಿಮಾ ಆಗಿ ಒಂದುವರೆ ವರ್ಷದ ಬಳಿಕ ಯಶ್ ಹೊಸ ಸಿನಿಮಾ ಮಾಡುತ್ತಿದ್ದು, ‘ಟಾಕ್ಸಿಕ್’ ಎಂಬ ಟೈಟಲ್ ಸಾಕಷ್ಟು ಕ್ರೇಜಿ ಹಾಗೂ ಕುತೂಹಲಭರಿತವಾಗಿದೆ. ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆ ದಿನಾಂಕ ಕೂಡ ರಿವೀಲ್ ಆಗಿದ್ದು, ಏಪ್ರಿಲ್ 10, 2025ರಂದು ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular