ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಕಿಂಗ್ ಸ್ಟಾರ್ ಯಶ್ ಬರೆಯುತ್ತಿರುವ ಹೊಸ ಅಧ್ಯಾಯಕ್ಕೆ ಈಗ ಇಡೀ ವಿಶ್ವವೇ ಸಾಕ್ಷಿಯಾಗುತ್ತಿದೆ. ಕೆಜಿಎಫ್ ಸರಣಿಯ ನಂತರ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಟಾಕ್ಸಿಕ್(Toxic) ಉತ್ತರ ನೀಡಿದ್ದು, ಈಗ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಹೊಸ ಚರಿತ್ರೆ ನಿರ್ಮಿಸಿದೆ.
ಪ್ಯಾನ್ ಇಂಡಿಯಾ ಅಲ್ಲ, ಇದು ಪ್ಯಾನ್ ವರ್ಲ್ಡ್ ಸಿನಿಮಾ
ಯಶ್ ಬ್ರ್ಯಾಂಡ್ ವ್ಯಾಲ್ಯೂ ಈಗ ಭಾರತದ ಗಡಿ ದಾಟಿದೆ. ಹಾಂಕಾಂಗ್‌ನಿಂದ ಹಾಲಿವುಡ್‌ವರೆಗೆ ಟಾಕ್ಸಿಕ್ ಸದ್ದು ಮಾಡುತ್ತಿದೆ. ಹಾಲಿವುಡ್ ಸಿನಿಮಾಗಳನ್ನು ವಿತರಿಸುವ ದುಬೈ ಮೂಲದ ದೈತ್ಯ ಸಂಸ್ಥೆ ಫಾರ್ಸ್ ಫಿಲ್ಮ್, ಟಾಕ್ಸಿಕ್ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನು ಬರೋಬ್ಬರಿ ₹105 ಕೋಟಿ ನೀಡಿ ಖರೀದಿಸಿದೆ ದಕ್ಷಿಣ ಭಾರತದ ಸಿನಿಮಾವೊಂದಕ್ಕೆ ವಿದೇಶಿ ಹಂಚಿಕೆಯಿಂದಲೇ ಇಷ್ಟು ದೊಡ್ಡ ಮೊತ್ತ ಸಿಕ್ಕಿರುವುದು ಇದೇ ಮೊದಲು.
ಯಶ್ ಬರೆದ ಹೊಸ ದಾಖಲೆಗಳು:
₹1000 ಕೋಟಿ ವ್ಯವಹಾರ: ಚಿತ್ರದ ಸ್ಯಾಟಲೈಟ್, ಒಟಿಟಿ (OTT), ಆಡಿಯೋ ಮತ್ತು ವಿತರಣಾ ಹಕ್ಕುಗಳ ಮೂಲಕ ಸಿನಿಮಾ ರಿಲೀಸ್ ಆಗುವ ಮೊದಲೇ ₹1000 ಕೋಟಿ ಕ್ಲಬ್ ಸೇರುವ ಅಂದಾಜಿದೆ.
ಗಲ್ಫ್ ರಾಷ್ಟ್ರಗಳ ಮೇಲೆ ಕಣ್ಣು: ಧುರಂಧರ್ 2 ನಂತಹ ಬಿಗ್ ಸಿನಿಮಾಗಳು ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್ ಆಗದ ಲಾಭವನ್ನು ಪಡೆದುಕೊಳ್ಳಲು ಯಶ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಇಂಗ್ಲಿಷ್ ಆವೃತ್ತಿ: ಕೇವಲ ಭಾರತೀಯ ಭಾಷೆಗಳಲ್ಲದೆ, ಟಾಕ್ಸಿಕ್ ಸಿನಿಮಾ ಇಂಗ್ಲಿಷ್ ಭಾಷೆಯಲ್ಲೂ ಜಾಗತಿಕವಾಗಿ ತೆರೆಕಾಣಲಿದೆ.
ವಿದೇಶದಲ್ಲಿ ಟಾಕ್ಸಿಕ್ ಅಬ್ಬರ: ₹105 ಕೋಟಿಗೆ ಓವರ್‌ಸೀಸ್ ಡೀಲ್
ಹಾಲಿವುಡ್ ಮತ್ತು ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾಗಳನ್ನು ವಿಶ್ವದಾದ್ಯಂತ ವಿತರಣೆ ಮಾಡುವ ಪ್ರಖ್ಯಾತ ಸಂಸ್ಥೆ ‘ಫಾರ್ಸ್ ಫಿಲ್ಮ್’ (Farars Film), ಈಗ ಟಾಕ್ಸಿಕ್ ಸಿನಿಮಾದ ವಿದೇಶಿ ಹಂಚಿಕೆ ಹಕ್ಕನ್ನು ಖರೀದಿಸಿದೆ.
ಡೀಲ್ ಮೊತ್ತ: ಬರೋಬ್ಬರಿ ₹105 ಕೋಟಿ
ವಿಶೇಷತೆ: ಇದು ಕೇವಲ ಭಾರತೀಯ ಭಾಷೆಗಳ (ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ) ಹಕ್ಕುಗಳ ಮೊತ್ತ ಮಾತ್ರ. ಇಂಗ್ಲಿಷ್ ಆವೃತ್ತಿಯ ಹಕ್ಕುಗಳನ್ನು ಬೇರೆಯದೇ ಸಂಸ್ಥೆಗೆ ನೀಡಲು ಚಿತ್ರತಂಡ ಪ್ಲಾನ್ ಮಾಡಿದೆ.
ರಿಲೀಸ್ ಮುನ್ನವೇ ₹1000 ಕೋಟಿ ಬ್ಯುಸಿನೆಸ್?
ಹೌದು, ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ, ಟಾಕ್ಸಿಕ್ ಸಿನಿಮಾ ಆಡಿಯೋ ಸ್ಯಾಟಲೈಟ್ ಒಟಿಟಿ ಮತ್ತು ವಿತರಣಾ ಹಕ್ಕುಗಳಿಂದಲೇ ಬಿಡುಗಡೆಗೂ ಮುನ್ನ ಬರೋಬ್ಬರಿ ₹1000 ಕೋಟಿ ವ್ಯವಹಾರ ಮಾಡುವ ಲಕ್ಷಣಗಳಿವೆ. ಯಶ್ ಅವರ ಗ್ಲೋಬಲ್ ಬ್ರ್ಯಾಂಡ್ ವ್ಯಾಲ್ಯೂ ಈ ಮಟ್ಟದ ಕ್ರೇಜ್ ಸೃಷ್ಟಿಸಿದೆ.
ಧುರಂಧರ್ 2 ಎಫೆಕ್ಟ್ ಮತ್ತು ಯಶ್ ಮಾಸ್ಟರ್ ಪ್ಲಾನ್
ದುಬೈ ಮೂಲದ ಫಾರ್ಸ್ ಫಿಲ್ಮ್ ಜೊತೆ ಕೈಜೋಡಿಸಿರುವುದರ ಹಿಂದೆ ದೊಡ್ಡ ರಾಜತಾಂತ್ರಿಕ ಲೆಕ್ಕಾಚಾರವಿದೆ. ಸದ್ಯ ಸುದ್ದಿಯಲ್ಲಿರುವ ಧುರಂಧರ್ 2 ಸಿನಿಮಾ ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿಲ್ಲ. ಈ ಗ್ಯಾಪ್ ಅನ್ನು ಬಳಸಿಕೊಂಡುa ಅರಬ್ ರಾಷ್ಟ್ರಗಳಲ್ಲಿ ಟಾಕ್ಸಿಕ್ ಅಲೆ ಎಬ್ಬಿಸಲು ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಭರ್ಜರಿ ಪ್ಲಾನ್ ಮಾಡಿದೆ.
ಏನಿದು ಟಾಕ್ಸಿಕ್ ಕಥೆ?
ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವು ಡ್ರಗ್ ಮಾಫಿಯಾ ಮತ್ತು ಭೂಗತ ಲೋಕದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಚಿತ್ರತಂಡ ಇದನ್ನು ‘ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ (ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ) ಎಂದು ಕರೆದಿದ್ದು, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.

