ಬೆಂಗಳೂರು: ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಸ್ಯಾಂಡಲ್ವುಡ್ನಿಂದ ಗ್ಲೋಬಲ್ ಮಟ್ಟಕ್ಕೆ ಬೆಳೆದು ನಿಂತಿರುವ ನಟ ರಾಕಿಂಗ್ ಸ್ಟಾರ್ ಯಶ್, ಈಗ ಟಾಕ್ಸಿಕ್ ಹಾಗೂ ರಾಮಾಯಣದಂತಹ ಬಹುಕೋಟಿ ವೆಚ್ಚದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಮಾತ್ರವಲ್ಲದೆ ರಿಯಲ್ ಎಸ್ಟೇಟ್ ಹೂಡಿಕೆಯಲ್ಲೂ ಯಶ್-ರಾಧಿಕಾ ಪಂಡಿತ್ ದಂಪತಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಅಲಿಬಾಗ್ನಲ್ಲಿ 24 ಕೋಟಿ ರೂ. ಮೌಲ್ಯದ ಪ್ರಾಪರ್ಟಿ ಖರೀದಿಸಿ ಸುದ್ದಿಯಾಗಿರುವ ಈ ತಾರಾ ದಂಪತಿಯ ಒಟ್ಟು ಆಸ್ತಿ ಸಾಮ್ರಾಜ್ಯದ ಸಂಪೂರ್ಣ ವಿವರ ಇಲ್ಲಿದೆ.
ಮಹಾರಾಷ್ಟ್ರದ ಅಲಿಬಾಗ್ನಲ್ಲಿ ಹೊಚ್ಚ ಹೊಸ ಬೀಚ್ ಹೌಸ್
ಮುಂಬೈನಲ್ಲಿ ಸಿನಿಮಾಗಳ ಚಿತ್ರೀಕರಣಕ್ಕಾಗಿ ಹೆಚ್ಚಿನ ಸಮಯ ಕಳೆಯುತ್ತಿರುವ ಯಶ್, ಅಲ್ಲಿಯೇ ತಮ್ಮ ಎರಡನೇ ಮನೆಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಜಾಗ ಮತ್ತು ವಿಸ್ತೀರ್ಣ: ಮುಂಬೈ ಸಮೀಪದ ರಾಯಗಢ ಜಿಲ್ಲೆಯ ಅಲಿಬಾಗ್ ತಾಲೂಕಿನ ಕಾಮತ್ ಗ್ರಾಮದಲ್ಲಿ, ಪ್ರಸಿದ್ಧ ಕಿಹಿಮ್ ಬೀಚ್ ಎದುರು ಒಟ್ಟು 5289 ಚದರ ಮೀಟರ್ (ಸರಿಸುಮಾರು 0.5289 ಹೆಕ್ಟೇರ್) ವಿಸ್ತೀರ್ಣದ ಎರಡು ಪಕ್ಕದ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ.
ವೈಶಿಷ್ಟ್ಯ: ಈ ಆಸ್ತಿಯ ಪಶ್ಚಿಮಕ್ಕೆ ವಿಶಾಲವಾದ ಸಮುದ್ರವಿದ್ದು, ಉತ್ತರದ ಕಿರಿದಾದ ರಸ್ತೆಯು ನೇರವಾಗಿ ಬೀಚ್ಗೆ ಸಂಪರ್ಕ ಕಲ್ಪಿಸುತ್ತದೆ. ಈ ಜಮೀನಿನಲ್ಲಿ ಒಂದು ಐಷಾರಾಮಿ ವಸತಿ ರಚನೆ (ಮನೆ) ಕೂಡ ಇದೆ.
ಖರೀದಿ ವಿವರ: ಮೇ 18, 2026 ರಂದು ನಡೆದ ಈ 24ಕೋಟಿ ರೂ. ಮೌಲ್ಯದ ವ್ಯವಹಾರಕ್ಕಾಗಿ 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ, 60000 ರೂ. ನೋಂದಣಿ ಶುಲ್ಕ ಹಾಗೂ 5200 ರೂ. ದಾಖಲೆ ನಿರ್ವಹಣಾ ಶುಲ್ಕ ಪಾವತಿಸಲಾಗಿದೆ. ವಕೀಲ ಪ್ರಶಾಂತ್ ದಿಲೀಪ್ ಹಾರ್ಡಿಕರ್ ಮೂಲಕ ನಸೀಮ್ ಇಕ್ಬಾಲ್ ಹಲೀಮ್ ಮತ್ತು ಇಫತ್ ಶಫೀಕ್ ಅಹ್ಮದಿ ಅವರಿಂದ ಈ ಜಾಗವನ್ನು ಖರೀದಿಸಲಾಗಿದೆ.
https://www.instagram.com/p/DS92o6VEh4K/?utm_source=ig_web_copy_link&igsh=NTc4MTIwNjQ2YQ==
ಬೆಂಗಳೂರಿನಲ್ಲಿರುವ ಐಷಾರಾಮಿ ನಿವಾಸಗಳು
ಕರ್ನಾಟಕದಲ್ಲೂ ಯಶ್ ಹಲವು ಪ್ರಮುಖ ಆಸ್ತಿಗಳನ್ನು ಹೊಂದಿದ್ದು, ಸದ್ಯ ಕುಟುಂಬದೊಂದಿಗೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಪ್ರೆಸ್ಟೀಜ್ ಗಾಲ್ಫ್ಶೈರ್ ಡ್ಯೂಪ್ಲೆಕ್ಸ್ ಫ್ಲಾಟ್: ಬೆಂಗಳೂರಿನ ಏರ್ಪೋರ್ಟ್ ರೋಡ್ನಲ್ಲಿರುವ ಅತ್ಯಂತ ಐಷಾರಾಮಿ ಪ್ರೆಸ್ಟೀಜ್ ಗಾಲ್ಫ್ಶೈರ್ನಲ್ಲಿ ಯಶ್ ಡ್ಯೂಪ್ಲೆಕ್ಸ್ ಫ್ಲಾಟ್ ಹೊಂದಿದ್ದು, ಸದ್ಯ ಪತ್ನಿ ರಾಧಿಕಾ ಹಾಗೂ ಮಕ್ಕಳ ಸಮೇತ ಇದೇ ಮನೆಯಲ್ಲಿ ವಾಸವಿದ್ದಾರೆ.
ನೈಸ್ ರೋಡ್ ಸಮೀಪದ ಮನೆ: ಯಶ್ ನಟನೆಯ ಸೂಪರ್ ಹಿಟ್ ‘ಗಜಕೇಸರಿ’ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನವೇ ಅವರು ಬೆಂಗಳೂರಿನ ನೈಸ್ ರೋಡ್ ಸಮೀಪ ಒಂದು ಸುಂದರ ಮನೆಯನ್ನು ಖರೀದಿಸಿದ್ದರು.
ಹಸಿರು ಪ್ರಕೃತಿಯ ನಡುವೆ ಹಾಸನದ ತೋಟ
ಕೇವಲ ಸಿಟಿ ಲೈಫ್ ಮಾತ್ರವಲ್ಲದೆ ಕೃಷಿ ಭೂಮಿ ಮೇಲೂ ಒಲವು ಹೊಂದಿರುವ ಯಶ್, ತಮ್ಮ ತವರು ಜಿಲ್ಲೆಯಾದ ಹಾಸನದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ.
೮೦ ಎಕರೆ ಭವ್ಯ ತೋಟ: ಹಾಸನ ಜಿಲ್ಲೆಯಲ್ಲಿ ಯಶ್ ಅವರು ಬರೋಬ್ಬರಿ ೮೦ ಎಕರೆ ವಿಸ್ತೀರ್ಣದ ಬೃಹತ್ ತೋಟವನ್ನು ಮಾಡಿದ್ದಾರೆ.
ತಾಯಿಗಾಗಿ ವಿಶೇಷ ಮನೆ: ಹಾಸನದ ವಿದ್ಯಾನಗರದಲ್ಲಿ ತಮ್ಮ ಪ್ರೀತಿಯ ತಾಯಿಯ ಹೆಸರಿಗೆ ೬೮ X ೭೦ ವಿಸ್ತೀರ್ಣದ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.
ಸ್ವಂತ ಪ್ರೊಡಕ್ಷನ್ ಹೌಸ್ ಹಾಗೂ ಬ್ಯುಸಿನೆಸ್ ಸಾಮ್ರಾಜ್ಯ
ಸಾಮಾನ್ಯ ಬಸ್ ಡ್ರೈವರ್ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ನೂರಾರು ಕೋಟಿ ಆಸ್ತಿಯ ಒಡೆಯನಾಗಿರುವ ಯಶ್ ಬಿಸಿನೆಸ್ ಮೈಂಡ್ ಕೂಡ ಅದ್ಭುತವಾಗಿದೆ.
ಕೆಜಿಎಫ್ ಚಾಪ್ಟರ್-೨ ಸಿನಿಮಾದ ಭರ್ಜರಿ ಸಕ್ಸಸ್ ಬೆನ್ನಲ್ಲೇ ಅದರ ಲಾಭದಲ್ಲಿ ಪಾಲುದಾರರಾಗಿದ್ದ ಯಶ್, ಜಾಹೀರಾತುಗಳ ಮೂಲಕವೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.
ಇದೀಗ ಸ್ವಂತವಾಗಿ ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದರ ಅಡಿಯಲ್ಲೇ ತಮ್ಮ ಮುಂದಿನ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಅಭಿಮಾನಿಗಳು ಕಾದು ಕುಳಿತಿರುವ ಟಾಕ್ಸಿಕ್ ಶೂಟಿಂಗ್ ಮುಗಿಯುತ್ತ ಬಂದಿದ್ದು, ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾಗಲಿರುವ ಬಿಗ್ ಬಜೆಟ್ ‘ರಾಮಾಯಣ’ ಚಿತ್ರದಲ್ಲಿ ಯಶ್ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ

