HomeEntertainmentಪ್ಯಾನ್ ಇಂಡಿಯಾ ಟ್ಯಾಗ್ ಶಾಶ್ವತವಲ್ಲ ಎಂದ ನಟ ಯಶ್: ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ

ಪ್ಯಾನ್ ಇಂಡಿಯಾ ಟ್ಯಾಗ್ ಶಾಶ್ವತವಲ್ಲ ಎಂದ ನಟ ಯಶ್: ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ

ಸ್ಯಾಂಡಲ್‌ವುಡ್ ‘ರಾಕಿಂಗ್ ಸ್ಟಾರ್’ ನಟ ಯಶ್ ಇತ್ತೀಚೆಗೆ ಉತ್ತರ ಭಾರತದ ಟಾಕ್ ಶೋ ಒಂದರಲ್ಲಿ ನೀಡಿದ ಸಂದರ್ಶನದಲ್ಲಿ ‘ಪ್ಯಾನ್ ಇಂಡಿಯಾ’ ಬಿರುದಿನ ಕುರಿತು ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಸಂದರ್ಶನದ ವೇಳೆ ನಿರೂಪಕರು, “ಅಲ್ಲು ಅರ್ಜುನ್, ರಾಮ್ ಚರಣ್ ಹಾಗೂ ವಿಜಯ್ ಅವರಂತಹ ಪ್ರಮುಖ ದಕ್ಷಿಣ ಭಾರತದ ನಟರಿಗೆ ಆರಂಭದಲ್ಲಿ ಸಿಗದ ಪ್ಯಾನ್ ಇಂಡಿಯಾ ಕ್ರೇಜ್ ನಿಮಗೆ ಹೇಗೆ ಒಲಿಯಿತು?” ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಯಶ್, “ಚಿತ್ರರಂಗದಲ್ಲಿ ಒಂದೇ ಒಂದು ಶುಕ್ರವಾರ ಪ್ರತಿಯೊಬ್ಬರ ಭವಿಷ್ಯವನ್ನೂ ಬದಲಾಯಿಸಬಲ್ಲದು. ಸಿನಿಮಾ ಯಶಸ್ವಿಯಾದರೆ ಮಾತ್ರ ಅಂತಹ ಬಿರುದುಗಳು ದೊರೆಯುತ್ತವೆ. ಚಿತ್ರ ಪ್ರದರ್ಶನದಲ್ಲಿ ಏರುಪೇರಾದರೆ ಈ ‘ಪ್ಯಾನ್ ಇಂಡಿಯಾ’ ಎಂಬ ಟ್ಯಾಗ್ ಕೂಡ ಇಲ್ಲವಾಗುತ್ತದೆ. ಯಾವುದೇ ನಟನಿಗೂ ಈ ಬಿರುದು ಶಾಶ್ವತವಲ್ಲ” ಎಂದು ನುಡಿದರು.

ಯಶ್ ಅವರ ಈ ಹೇಳಿಕೆಗೆ ತೆಲುಗು ಮತ್ತು ತಮಿಳು ಚಿತ್ರರಂಗದ ನಟರ ಅಭಿಮಾನಿಗಳಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಯಶ್ ಅಭಿಮಾನಿಗಳು ಹಾಗೂ ಚಲನಚಿತ್ರ ವಿಶ್ಲೇಷಕರು ಈ ಹೇಳಿಕೆಯನ್ನು ಬೆಂಬಲಿಸಿದ್ದು, ಯಶ್ ಯಾವುದೇ ನಟರನ್ನು ತಗ್ಗಿಸಿ ಮಾತನಾಡಿಲ್ಲ. ಸಿನಿಮಾದ ಯಶಸ್ಸು ಮತ್ತು ಸೋಲುಗಳ ವಾಸ್ತವತೆಯನ್ನು ಮಾತ್ರ ಅವರು ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular