HomeIndiaBIG NEWS : ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆ ನಿರ್ಮಾಣಕ್ಕೆ 'NASA' ಸಜ್ಜು; 2030ಕ್ಕೆ...

BIG NEWS : ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆ ನಿರ್ಮಾಣಕ್ಕೆ ‘NASA’ ಸಜ್ಜು; 2030ಕ್ಕೆ ಹೊಸ ಇತಿಹಾಸ!

ಚಂದ್ರನ ಮೇಲೆ ಮಾನವನ ವಾಸಕ್ಕೆ ದಾರಿ ಮಾಡಿಕೊಡುವ ಮಹತ್ವಾಕಾಂಕ್ಷೆಯ ಯೋಜನೆಗೆ ನಾಸಾ ವೇಗ ನೀಡಿದೆ. 2030ರ ವೇಳೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಶ್ವತ ಬೇಸ್ ಕ್ಯಾಂಪ್ ನಿರ್ಮಿಸುವ ಗುರಿಯನ್ನು ಹೊಂದಿರುವ ನಾಸಾ, ಗಗನಯಾತ್ರಿಗಳು ಸುಮಾರು ಒಂದರಿಂದ ಎರಡು ತಿಂಗಳ ಕಾಲ ಅಲ್ಲಿಯೇ ವಾಸಿಸಿ ಸಂಶೋಧನೆ ನಡೆಸಲು ಅಗತ್ಯವಿರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸುತ್ತಿದೆ.

ಚಂದ್ರನ ಮೇಲೆ ಮಾನವನ ಶಾಶ್ವತ ವಾಸಕ್ಕೆ ಸಿದ್ಧತೆ

1972ರಲ್ಲಿ ಅಪೊಲೊ-17 ಮಿಷನ್ ಮೂಲಕ ಮಾನವನು ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟಿದ್ದ. ಐದು ದಶಕಗಳ ಬಳಿಕ ಇದೀಗ ನಾಸಾ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಕೇವಲ ಚಂದ್ರನ ಮೇಲೆ ಇಳಿದು ವಾಪಸ್ ಬರುವ ಬದಲು, ಗಗನಯಾತ್ರಿಗಳು ದೀರ್ಘಕಾಲ ಅಲ್ಲಿಯೇ ವಾಸಿಸುವಂತೆ ಶಾಶ್ವತ ಬೇಸ್ ಕ್ಯಾಂಪ್ ನಿರ್ಮಿಸುವ ಯೋಜನೆಯನ್ನು ರೂಪಿಸಿದೆ.

ದಕ್ಷಿಣ ಧ್ರುವದಲ್ಲೇ ಯಾಕೆ?

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರೀ ಪ್ರಮಾಣದ ನೀರು ಹಿಮದ ರೂಪದಲ್ಲಿ ಸಂಗ್ರಹವಾಗಿರಬಹುದು ಎಂಬ ಅಂದಾಜು ಇದೆ. ಈ ಹಿಮವನ್ನು ಕರಗಿಸಿ ಕುಡಿಯುವ ನೀರಾಗಿ ಬಳಸುವುದರ ಜೊತೆಗೆ, ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸಿ ಭವಿಷ್ಯದ ಬಾಹ್ಯಾಕಾಶ ನೌಕೆಗಳಿಗೆ ಅಗತ್ಯವಿರುವ ರಾಕೆಟ್ ಇಂಧನವಾಗಿಯೂ ಬಳಸಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈನಸ್ 248 ಡಿಗ್ರಿ ತಾಪಮಾನ!

ಚಂದ್ರನ ಮೇಲೆ ತಾಪಮಾನವು ಮೈನಸ್ 248 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ಸಾಧ್ಯತೆ ಇರುವುದರಿಂದ, ಅಲ್ಲಿ ಮಾನವರು ವಾಸಿಸಲು ಅತ್ಯಾಧುನಿಕ ತಂತ್ರಜ್ಞಾನ ಅಗತ್ಯವಿದೆ. ಇದಕ್ಕಾಗಿ ನಾಸಾ ಸುಧಾರಿತ ಲೈಫ್ ಸಪೋರ್ಟ್ ಸಿಸ್ಟಮ್ಸ್ ಮತ್ತು ನ್ಯೂಕ್ಲಿಯರ್ ಪವರ್ ಸಿಸ್ಟಮ್ಸ್ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಬಳಸಲು ಮುಂದಾಗಿದೆ.

ಆರ್ಟೆಮಿಸ್ ಬೇಸ್ ಕ್ಯಾಂಪ್‌ನಲ್ಲಿ ಏನೇನಿರಲಿದೆ?

ಚಂದ್ರನ ಮೇಲಿನ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಆರ್ಟೆಮಿಸ್ ಬೇಸ್ ಕ್ಯಾಂಪ್ ಪ್ರಮುಖ ಕೇಂದ್ರವಾಗಿರಲಿದೆ. ಇಲ್ಲಿ ಆಧುನಿಕ ಲೂನಾರ್ ಟೆರೈನ್ ವೆಹಿಕಲ್ಸ್, ಗಗನಯಾತ್ರಿಗಳು ವಾಸಿಸಲು ಹ್ಯಾಬಿಟಾಟ್ ಹೌಸ್, ಸೌರ ಫಲಕಗಳು ಹಾಗೂ ಸಂವಹನ ಗೋಪುರಗಳನ್ನು ನಿರ್ಮಿಸುವ ಯೋಜನೆಯಿದೆ.

ಗಗನಯಾತ್ರಿಗಳು ಸುಮಾರು ಎರಡು ತಿಂಗಳ ಕಾಲ ಚಂದ್ರನ ಮೇಲೆಯೇ ವಾಸವಿದ್ದು, ಅಲ್ಲಿನ ಪರಿಸರ, ಸಂಪನ್ಮೂಲಗಳು ಹಾಗೂ ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದಂತೆ ವಿವಿಧ ಸಂಶೋಧನೆಗಳನ್ನು ನಡೆಸಲಿದ್ದಾರೆ.

ಒಟ್ಟಿನಲ್ಲಿ, ಚಂದ್ರನ ಮೇಲೆ ಮಾನವನ ದೀರ್ಘಕಾಲದ ವಾಸಕ್ಕೆ ಅಡಿಪಾಯ ಹಾಕುವ ನಾಸಾದ ಈ ಯೋಜನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುವ ನಿರೀಕ್ಷೆ ಮೂಡಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular