ಜೀವನದ ವಿವಿಧ ಹಂತಗಳಲ್ಲಿ ಬಾಂಡ್ಗಳು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತವೆ. ನಿಮ್ಮ ಆದಾಯ, ಜವಾಬ್ದಾರಿಗಳು ಮತ್ತು ಹಣಕಾಸಿನ ಗುರಿಗಳು ಬದಲಾಗುತ್ತಿದ್ದಂತೆ ಬಾಂಡ್ಗಳಲ್ಲಿ ಹೂಡಿಕೆ ಮಾಡುವ ತಂತ್ರವೂ ಬದಲಾಗಬೇಕು.
30–40 ವರ್ಷ: ಹೂಡಿಕೆ ನಿರ್ಮಿಸಿ, ಮರುಹೂಡಿಕೆ ಮಾಡಿ
30ರ ಹರೆಯದಲ್ಲಿ ಮುಖ್ಯ ಗಮನವು ಹೂಡಿಕೆ ಮಾಡಿದ ಹಣದಿಂದ ತಕ್ಷಣದ ಆದಾಯ ಪಡೆಯುವುದಕ್ಕಿಂತ ಹೂಡಿಕೆ ಬಂಡವಾಳವನ್ನು ಹೆಚ್ಚಿಸುವುದರ ಮೇಲೆ ಇರಬೇಕು.ಈಕ್ವಿಟಿ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬಂದಾಗ ಬಾಂಡ್ಗಳು ಪೋರ್ಟ್ಫೋಲಿಯೊಗೆ ಸಮತೋಲನ ನೀಡಬಹುದು. ಬಾಂಡ್ಗಳಿಂದ ಬರುವ ಬಡ್ಡಿಯನ್ನು ಮತ್ತೆ ಹೂಡಿಕೆ ಮಾಡುವುದರಿಂದ ಕಾಲಕ್ರಮೇಣ ಹೂಡಿಕೆ ಮೊತ್ತವನ್ನು ಹೆಚ್ಚಿಸಬಹುದು.
ಉದಾಹರಣೆಗೆ, ₹5 ಲಕ್ಷವನ್ನು ಶೇಕಡಾ 9ರ ಅಂದಾಜು ಬಡ್ಡಿದರದಲ್ಲಿ ಹೂಡಿಕೆ ಮಾಡಿದರೆ, ತೆರಿಗೆಗೆ ಮುನ್ನ ವರ್ಷಕ್ಕೆ ಸುಮಾರು ₹45,000 ಆದಾಯ ಬರಬಹುದು. ಈ ಮೊತ್ತವನ್ನು ಮರುಹೂಡಿಕೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಬಂಡವಾಳ ಹಾಗೂ ಆದಾಯದ ಸಾಮರ್ಥ್ಯ ಎರಡೂ ಹೆಚ್ಚಬಹುದು.
ಹೂಡಿಕೆದಾರರು ತಮ್ಮ ಸಂಪೂರ್ಣ ಹಣವನ್ನು ಒಂದೇ ಅವಧಿಯ ಬಾಂಡ್ನಲ್ಲಿ ಇರಿಸುವ ಬದಲು ವಿವಿಧ ಅವಧಿಯ ಬಾಂಡ್ಗಳಲ್ಲಿ ಹಂಚಿಕೆ ಮಾಡಬಹುದು.
Jiraafನಂತಹ ಡಿಜಿಟಲ್ ವೇದಿಕೆಗಳಲ್ಲಿ ವಿವಿಧ ರೇಟಿಂಗ್, ಬಡ್ಡಿದರ ಮತ್ತು ಅವಧಿಯ ಲಿಸ್ಟೆಡ್ ಕಾರ್ಪೊರೇಟ್ ಬಾಂಡ್ಗಳು ಹಾಗೂ ಸರ್ಕಾರಿ ಸೆಕ್ಯುರಿಟಿಗಳನ್ನು ಪರಿಶೀಲಿಸಬಹುದು. ಆದರೆ ಹೆಚ್ಚಿನ ಬಡ್ಡಿದರ ಮಾತ್ರ ನೋಡದೆ, ಬಾಂಡ್ ನೀಡುವ ಸಂಸ್ಥೆಯ ಗುಣಮಟ್ಟ, ಮರುಪಾವತಿ ಸಾಮರ್ಥ್ಯ ಮತ್ತು ಹೂಡಿಕೆದಾರರ ಅಗತ್ಯಗಳಿಗೆ ಹೊಂದಾಣಿಕೆ ಕೂಡ ಮುಖ್ಯ.
40–50 ವರ್ಷ: ಹಣಕಾಸಿನ ಗುರಿಗಳಿಗೆ ತಕ್ಕಂತೆ ಬಾಂಡ್ ಆಯ್ಕೆ
40ರ ಹರೆಯದಲ್ಲಿ ಮಕ್ಕಳ ಉನ್ನತ ಶಿಕ್ಷಣ, ಮನೆ ನವೀಕರಣ, ಪ್ರವಾಸ ಅಥವಾ ಇತರ ಯೋಜಿತ ವೆಚ್ಚಗಳಂತಹ ಮಧ್ಯಮ ಅವಧಿಯ ಗುರಿಗಳಿಗೆ ಬಾಂಡ್ಗಳು ನೆರವಾಗಬಹುದು.
ಇಲ್ಲಿ ಪ್ರಮುಖ ವಿಚಾರವೆಂದರೆ ನಿಮ್ಮ ಹಣ ಯಾವಾಗ ಬೇಕಾಗುತ್ತದೆ ಎಂಬುದಕ್ಕೆ ಅನುಗುಣವಾಗಿ ಬಾಂಡ್ನ ಮೆಚ್ಯುರಿಟಿ ಅವಧಿಯನ್ನು ಹೊಂದಿಸುವುದು.
ಉದಾಹರಣೆಗೆ, ಮೂರು ಅಥವಾ ನಾಲ್ಕು ವರ್ಷಗಳ ನಂತರ ಅಗತ್ಯವಿರುವ ಹಣವನ್ನು ಸಂಪೂರ್ಣವಾಗಿ ಷೇರು ಮಾರುಕಟ್ಟೆಯ ಏರಿಳಿತಕ್ಕೆ ಒಳಪಡಿಸುವ ಬದಲು, ಆ ಅವಧಿಯ ಆಸುಪಾಸಿನಲ್ಲಿ ಮೆಚ್ಯುರ್ ಆಗುವ ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದು.
ಈ ಹಂತದಲ್ಲಿ ಬಾಂಡ್ ಪೋರ್ಟ್ಫೋಲಿಯೊವನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ನಿವೃತ್ತಿ ಎಂಬ ವಿಭಾಗಗಳಾಗಿ ವಿಂಗಡಿಸಬಹುದು.
ಬಾಂಡ್ಗಳನ್ನು ವಿವಿಧ ಸಂಸ್ಥೆಗಳು, ಅವಧಿಗಳು, ಅಪಾಯದ ಮಟ್ಟಗಳು ಮತ್ತು ಆದಾಯದ ಸಾಧ್ಯತೆಗಳ ನಡುವೆ ವೈವಿಧ್ಯಗೊಳಿಸುವುದು ಮುಖ್ಯ.
50–60 ವರ್ಷ: ನಿವೃತ್ತಿ ಆದಾಯಕ್ಕಾಗಿ ಬಾಂಡ್ ಲ್ಯಾಡರ್
ನಿವೃತ್ತಿಗೆ ಮುನ್ನದ ದಶಕದಲ್ಲಿ ಬಾಂಡ್ ಲ್ಯಾಡರ್ ನಿರ್ಮಿಸಲು ಪ್ರಾರಂಭಿಸುವುದು ಸೂಕ್ತ ಸಮಯವಾಗಬಹುದು.
ಬಾಂಡ್ ಲ್ಯಾಡರ್ ಎಂದರೆ ವಿವಿಧ ಮೆಚ್ಯುರಿಟಿ ದಿನಾಂಕಗಳನ್ನು ಹೊಂದಿರುವ ಬಾಂಡ್ಗಳಲ್ಲಿ ಹೂಡಿಕೆ ಮಾಡುವುದು. ಒಂದು ಬಾಂಡ್ ಒಂದು ವರ್ಷದ ನಂತರ, ಮತ್ತೊಂದು ಎರಡು ವರ್ಷಗಳ ನಂತರ ಹೀಗೆ ಮೆಚ್ಯುರ್ ಆಗುವಂತೆ ಹೂಡಿಕೆ ಮಾಡಬಹುದು.
ಇದರಿಂದ ನಿರ್ದಿಷ್ಟ ಅವಧಿಗಳಲ್ಲಿ ಹಣ ಲಭ್ಯವಾಗುತ್ತದೆ ಮತ್ತು ಸಂಪೂರ್ಣ ಹಣವನ್ನು ಒಂದೇ ಬಡ್ಡಿದರದಲ್ಲಿ ಹೂಡಿಕೆ ಮಾಡುವ ಅಗತ್ಯ ಕಡಿಮೆಯಾಗುತ್ತದೆ.
ಉದಾಹರಣೆಗೆ, ₹50 ಲಕ್ಷವನ್ನು ಸರಾಸರಿ ಶೇಕಡಾ 8.5ರ ಅಂದಾಜು ಆದಾಯ ನೀಡುವ ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ, ತೆರಿಗೆಗೆ ಮುನ್ನ ವರ್ಷಕ್ಕೆ ಸುಮಾರು ₹4.25 ಲಕ್ಷ ಅಥವಾ ತಿಂಗಳಿಗೆ ಸುಮಾರು ₹35,400 ಆದಾಯ ಸಿಗಬಹುದು.
ಈ ಆದಾಯವನ್ನು ಅಗತ್ಯ ವೆಚ್ಚಗಳ ಒಂದು ಭಾಗಕ್ಕೆ ಬಳಸಿಕೊಳ್ಳಬಹುದು. ಇದೇ ವೇಳೆ ದೀರ್ಘಾವಧಿಯ ಅಗತ್ಯಗಳು ಮತ್ತು ಹಣದುಬ್ಬರವನ್ನು ಎದುರಿಸಲು ಬೆಳವಣಿಗೆ ಆಧಾರಿತ ಹೂಡಿಕೆಗಳನ್ನು ಮುಂದುವರಿಸಬಹುದು.
ಹೂಡಿಕೆದಾರರ ಅಪಾಯ ಸ್ವೀಕಾರ ಸಾಮರ್ಥ್ಯಕ್ಕೆ ಅನುಗುಣವಾಗಿ ಸರ್ಕಾರಿ ಸೆಕ್ಯುರಿಟಿಗಳು, ಉತ್ತಮ ರೇಟಿಂಗ್ ಹೊಂದಿರುವ ಕಾರ್ಪೊರೇಟ್ ಬಾಂಡ್ಗಳು, ಫಿಕ್ಸ್ಡ್ ಡೆಪಾಸಿಟ್ಗಳು ಮತ್ತು ಲಿಕ್ವಿಡ್ ಇನ್ಸ್ಟ್ರುಮೆಂಟ್ಗಳನ್ನು ಒಳಗೊಂಡ ಮಿಶ್ರ ಪೋರ್ಟ್ಫೋಲಿಯೊ ಹೊಂದಬಹುದು.
ನಿವೃತ್ತಿಯ ನಂತರ: ಆದಾಯ ಮತ್ತು ಲಿಕ್ವಿಡಿಟಿಗೆ ಆದ್ಯತೆ
ನಿವೃತ್ತಿಯ ನಂತರ ಬಾಂಡ್ಗಳ ಮುಖ್ಯ ಉದ್ದೇಶ ಹೂಡಿಕೆ ಬಂಡವಾಳವನ್ನು ಹೆಚ್ಚಿಸುವುದರಿಂದ ನಿಯಮಿತ ಆದಾಯ ಗಳಿಸುವತ್ತ ಬದಲಾಗುತ್ತದೆ.ನಿಯಮಿತವಾಗಿ ಸಿಗುವ ಬಾಂಡ್ ಆದಾಯವನ್ನು ಮನೆ ಖರ್ಚು, ವೈದ್ಯಕೀಯ ವೆಚ್ಚ, ವಿಮಾ ಪ್ರೀಮಿಯಂ ಮತ್ತು ಪ್ರವಾಸದಂತಹ ಅಗತ್ಯಗಳಿಗೆ ಬಳಸಬಹುದು.
ಆದರೆ ನಿವೃತ್ತರು ತಮ್ಮ ಸಂಪೂರ್ಣ ಹಣವನ್ನು ಒಂದೇ ಆಸ್ತಿ ವರ್ಗದಲ್ಲಿ ಹೂಡಿಕೆ ಮಾಡಬಾರದು.ಉತ್ತಮ ವಿಧಾನವೆಂದರೆ ಹೂಡಿಕೆಯನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸುವುದು:
ಲಿಕ್ವಿಡ್ ಹಣ: 12 ತಿಂಗಳ ವೆಚ್ಚಗಳಿಗೆ ಉಳಿತಾಯ ಖಾತೆ, ಎಫ್ಡಿ ಮತ್ತು ಲಿಕ್ವಿಡ್ ಬಾಂಡ್ಗಳು.
ಕಾರ್ಪೊರೇಟ್ ಅಥವಾ ಸರ್ಕಾರಿ ಬಾಂಡ್ಗಳು: ನಿಯಮಿತ ಆದಾಯ ನೀಡುವ ಮತ್ತು ಮುಂದಿನ ಹಲವು ವರ್ಷಗಳಲ್ಲಿ ಮೆಚ್ಯುರ್ ಆಗುವ ಹೂಡಿಕೆಗಳು.
ದೀರ್ಘಾವಧಿಯ ಹೂಡಿಕೆಗಳು: ದೀರ್ಘಕಾಲದ ಬೆಳವಣಿಗೆ ಮತ್ತು ಹಣದುಬ್ಬರವನ್ನು ಎದುರಿಸಲು ಕೆಲವು ಈಕ್ವಿಟಿ ಹೂಡಿಕೆಗಳು.
ವೈವಿಧ್ಯೀಕರಣವೂ ಅಷ್ಟೇ ಮುಖ್ಯ. ನಿವೃತ್ತರು ತಮ್ಮ ಹೆಚ್ಚಿನ ಹಣವನ್ನು ಒಂದೇ ಸಂಸ್ಥೆ, ಕ್ಷೇತ್ರ ಅಥವಾ ಒಂದೇ ಮೆಚ್ಯುರಿಟಿ ಅವಧಿಯಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸಬೇಕು.
Jiraafನಂತಹ ಡಿಜಿಟಲ್ ವೇದಿಕೆಗಳು ಬಾಂಡ್ಗಳನ್ನು ಆದಾಯ, ರೇಟಿಂಗ್, ಮೆಚ್ಯುರಿಟಿ ಮತ್ತು ಪಾವತಿ ಅವಧಿಯ ಆಧಾರದ ಮೇಲೆ ಹೋಲಿಸಲು ಸಹಾಯ ಮಾಡಬಹುದು.
ಒಂದೇ ಬಾಂಡ್ ತಂತ್ರ ಜೀವನಪೂರ್ತಿ ಇರಲು ಸಾಧ್ಯವಿಲ್ಲ
30ರ ಹರೆಯದಲ್ಲಿ ಬಾಂಡ್ಗಳು ಪೋರ್ಟ್ಫೋಲಿಯೊ ನಿರ್ಮಾಣ ಮತ್ತು ವೈವಿಧ್ಯೀಕರಣಕ್ಕೆ ನೆರವಾಗಬಹುದು. 40ರ ಹರೆಯದಲ್ಲಿ ಯೋಜಿತ ಹಣಕಾಸಿನ ಗುರಿಗಳಿಗೆ ಅವು ಸಹಾಯ ಮಾಡಬಹುದು. 50ರ ಹರೆಯದಲ್ಲಿ ನಿವೃತ್ತಿಗೆ ಸಿದ್ಧತೆ ನಡೆಸಲು ನೆರವಾಗಬಹುದು. ನಿವೃತ್ತಿಯ ನಂತರ ನಿಯಮಿತ ನಗದು ಹರಿವಿನ ಒಂದು ಭಾಗವನ್ನು ಒದಗಿಸಬಹುದು.
ಹೀಗಾಗಿ ಅತ್ಯಧಿಕ ಬಡ್ಡಿದರ ನೀಡುವ ಬಾಂಡ್ ತಂತ್ರವೇ ಅತ್ಯುತ್ತಮವಲ್ಲ. ನಿಮ್ಮ ಜೀವನದ ಹಂತ, ಹಣಕಾಸಿನ ಗುರಿಗಳು ಮತ್ತು ಅಪಾಯ ಸ್ವೀಕಾರ ಸಾಮರ್ಥ್ಯಕ್ಕೆ ಹೊಂದಿಕೆಯಾಗುವ ತಂತ್ರವೇ ಉತ್ತಮ.

