HomeKarnatakaಊರಿಗೆ ಹೋಗಲು ಬೇರೆ ವಾಹನ ಸಿಕ್ಕಿಲ್ಲವೆಂದು ಕೆ.ಕೆ.ಆರ್.ಟಿ.ಸಿ ಬಸ್ಸನ್ನೇ ಕದ್ದೊಯ್ದ ಡ್ರೈವರ್

ಊರಿಗೆ ಹೋಗಲು ಬೇರೆ ವಾಹನ ಸಿಕ್ಕಿಲ್ಲವೆಂದು ಕೆ.ಕೆ.ಆರ್.ಟಿ.ಸಿ ಬಸ್ಸನ್ನೇ ಕದ್ದೊಯ್ದ ಡ್ರೈವರ್

ಯಾದಗಿರಿ: ಇದೆಂತಹ ವಿಚಿತ್ರ ಘಟನೆ ನೋಡಿ. ಊರಿಗೆ ಹೋಗಲು ಬೆರೆ ವಾಹನ ಸಿಗಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನೊಬ್ಬ ಬಸ್ಸನ್ನೇ ಕದ್ದೊಯ್ದ ಘಟನೆಗೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಿಂದ ಕೆ.ಕೆ.ಆರ್.ಟಿ.ಸಿ ಬಸ್ ಕದ್ದೊಯ್ಯಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ವೈರಲ್ ಆಗಿವೆ. ಕೆ.ಕೆ.ಆರ್.​ಟಿ.ಸಿಗೆ ಸೇರಿದ ಬಸ್‌ ಅನ್ನು ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕರಾಗಿದ್ದ ಮಹಿಪಾಲರೆಡ್ಡಿ ಕದ್ದೊಯ್ದಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆ ಮಹಿಪಾಲರೆಡ್ಡಿಯನ್ನು ವಜಾಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ಮಹಿಪಾಲರೆಡ್ಡಿ ತೆಗೆದುಕೊಂಡು ಹೋಗಿದ್ದಾರೆ. ಸ್ವಗ್ರಾಮ ರಾಚನಳ್ಳಿಗೆ ತೆರಳಲು ಯಾವುದೇ ವಾಹನ ಸಿಗದಿದ್ದರಿಂದ ಈ ಕೃತ್ಯವೆಸಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಬಸ್ ಕದ್ದೊಯ್ದ ಬಳಿಕ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ಬಸ್ ನಿಲ್ಲಿಸಿ, ಅಲ್ಲಿಂದ ತೆರಳಿದ್ದರು. ಬಳಿಕ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತನಿಖೆ ನಡೆಸಿ ಬಸ್‌ ಅನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular