HomeLatest NewsBIG NEWS: ಭಾರಿ ಮಳೆಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು: ಯಾದಗಿರಿಯಲ್ಲಿ ಬಿರುಕುಬಿಟ್ಟ ಸೇತುವೆ; ಕಂಗಾಲಾದ...

BIG NEWS: ಭಾರಿ ಮಳೆಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು: ಯಾದಗಿರಿಯಲ್ಲಿ ಬಿರುಕುಬಿಟ್ಟ ಸೇತುವೆ; ಕಂಗಾಲಾದ ಜಿಲ್ಲೆಯ ಜನರು

ಯಾದಗಿರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಧಾರಾಕಾರ ಮಳೆಯಿಂದಾಗಿ ರಾಜ್ಯದ ನದಿಗಳು ತುಂಬಿ ಹರಿಯುತ್ತಿವೆ. ಉತ್ತರ ಒಳನಾಡಿನ ಕೆಲ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಯಾದಗಿರಿ, ರಾಯಚೂರು ಕೊಪ್ಪಳ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕೃಷಿ ಭೂಮಿ, ಗ್ರಾಮಗಳು ಜಲಾವೃತಗೊಂಡಿವೆ. ಭೀಮಾ ನದಿ ಪ್ರವಾಹದಂತೆ ಹರಿಯುತ್ತಿದ್ದು, ಇದರಿಂದಾಗಿ ಆತಂಕ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ನಿಜಾಮರಕಾಲದ ಸೇತುವೆಯೊಂದು ಬಿರುಕುಬಿಟ್ಟಿದ್ದು, ಜಿಲ್ಲೆಯ ಜನರನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ. ಯಾದಗಿರಿಯಿಂದ ಹೈದರಾಬಾದ್ ಗೆ ಸಂಪರ್ಕ್ ಕಲ್ಪಿಸುವ ಸುಮಾರು 1 ಕಿ.ಮೀ ವ್ಯಾಪ್ತಿಯ ಸೇತುವೆ ಇದಾಗಿದ್ದು, ಸೇತುವೆಯಲ್ಲಿ ಬಿರುಕು ಮೂಡಿದೆ. ಜೀವಭಯದಲ್ಲೇ ಜನರು ಸೇತುವೆ ಮೇಲೆ ಸಂಚರಿಸುವ ಸ್ಥಿತಿ ಎದುರಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular