HomeKarnatakaಬೆಂಗಳೂರಿನಲ್ಲಿ ಫ್ಲಾಟ್ ಬಾಡಿಗೆ ನೀಡಲೂ ಸಂದರ್ಶನ.....! ವೈರಲ್‌ ಆಗಿದೆ ಪೋಸ್ಟ್

ಬೆಂಗಳೂರಿನಲ್ಲಿ ಫ್ಲಾಟ್ ಬಾಡಿಗೆ ನೀಡಲೂ ಸಂದರ್ಶನ…..! ವೈರಲ್‌ ಆಗಿದೆ ಪೋಸ್ಟ್

ಐಟಿ ಹಬ್‌ ಬೆಂಗಳೂರಿಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಎಲ್ಲಿ ನೋಡಿದ್ರೂ ದೊಡ್ಡ ದೊಡ್ಡ ಬಿಲ್ಡಿಂಗ್‌ ತಲೆ ಎತ್ತಿದೆ. ಇಷ್ಟೆಲ್ಲ ಮನೆ, ಫ್ಲಾಟ್‌ ಗಳಿದ್ರೂ ಬಾಡಿಗೆಗೆ ಮನೆ ಸಿಗೋದು ತುಂಬಾ ಕಷ್ಟ. ಮನೆ ಬಾಡಿಗೆಗೆ ನೀಡುವ ಮುನ್ನ ಮನೆ ಮಾಲೀಕ ಅನೇಕ ವಿಷ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಾನೆ.

ಬಾಡಿಗೆ ಮನೆಯಲ್ಲಿ ಎಷ್ಟು ಮಂದಿ ವಾಸವಿರ್ತಾರೆ, ಅವರ ಕೆಲಸವೇನು ಎಂಬ ಮಾಹಿತಿ ಪಡೆದು ನಂತ್ರ ತನ್ನ ಕಂಡಿಷನ್‌ ಹೇಳಿ ಮನೆ ಬಾಡಿಗೆಗೆ ನೀಡ್ತಾನೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಫ್ಲಾಟ್‌ ಮಾಲಿಕನ ಸಂದರ್ಶನದ ವಿಷ್ಯ ವೈರಲ್‌ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಶು ಎಂಬ ಮಹಿಳೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಸ್ಕ್ರೀನ್‌ ಶಾಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಫ್ಲಾಟ್‌ ಮಾಲಿಕನ ಸಂದೇಶವಿದೆ. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಗಿದೆ. ನಾನು ಭೇಟಿ ಸಂದರ್ಭದಲ್ಲಿ ಹೇಳಿದಂತೆ ಅನೇಕರು ಫ್ಲಾಟ್‌ ಬಾಡಿಗೆಗೆ ಬರ್ತಿದ್ದಾರೆ. ನಾನು ಎಲ್ಲರನ್ನು ಭೇಟಿಯಾಗಿಲ್ಲ. ಹಾಗಾಗಿ ಸಂದರ್ಶನ ಏರ್ಪಡಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಯಾರು ಫ್ಲಾಟ್‌ ಸುಂದರವಾಗಿ ಇಟ್ಟುಕೊಳ್ತಾರೆ ಅವರಿಗೆ ಬಾಡಿಗೆ ನೀಡ್ತೇನೆ. ನಾನು ಶಾರ್ಟ್‌ಲಿಸ್ಟ್ ಮಾಡಿದ್ದೇನೆ ಮತ್ತು ನಾನು ನಿಮಗೆ ಮೊದಲ ಅವಕಾಶವನ್ನು ನೀಡಲು ಬಯಸುತ್ತೇನೆ ಎಂದು ಮೆಸ್ಸೇಜ್‌ ಕಳುಹಿಸಿದ್ದಾನೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಇಶು, ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಹಣದ ಬಗ್ಗೆ, ಬಾಡಿಗೆದಾರರ ಬಗ್ಗೆ ಮಾಹಿತಿ ಪಡೆಯೋದು ಗೊತ್ತು. ಆದ್ರೆ ಸಂದರ್ಶನ ನನ್ನ ತಿಳುವಳಿಕೆಗೆ ಮೀರಿದ್ದು ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ವೈರಲ್‌ ಆಗಿದ್ದು, ಅನೇಕ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular