HomeKarnatakaಮಹಿಳೆಯರಿಗೆ ಗುಡ್ ನ್ಯೂಸ್: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಿಳೆಯರಿಗೆ ಗುಡ್ ನ್ಯೂಸ್: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ “ಸಖಿ”(ಒನ್ ಸ್ಟಾಪ್ ಸೆಂಟರ್) ಘಟಕ ಯೋಜನೆಯಡಿ 2024-25ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ, ವಿದ್ಯಾರ್ಹತೆ, ಗೌರವಧನದ ವಿವರ:

ಸೆಂಟರ್ ಅಡ್ಮಿನಿಸ್ಟ್ರೇಟರ್-1 ಹುದ್ದೆಗೆ ಎಂಎಸ್ ಡಬ್ಲ್ಯೂ/ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ, ಎಂಎಸ್ಸಿ ಗೃಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ(ಮಾನವ ಅಭಿವೃದ್ಧಿ ಮತ್ತು ಕುಟುಂಬ ಸಂಬಂಧ), ಎಂಎಸ್ಸಿ ಸೈಕಾಲಜಿ, ಎಂಎಸ್ಸಿ ಮನೋವೈದ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕೌನ್ಸೆಲಿಂಗ್ ಕ್ಷೇತ್ರದಲ್ಲಿ ಕನಿಷ್ಟ ಐದು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ. ಮಾಸಿಕ 40,000 ರೂ. ವೇತನ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೌನ್ಸಲರ್-(ಸೈಕೋ ಸೋಶಿಯಲ್ ಕೌನ್ಸೆಲಿಂಗ್) 1 ಹುದ್ದೆಗೆ ಎಂಎಸ್ ಡಬ್ಲ್ಯೂ, ಎಂಎಸ್ಸಿ ಗೃಹ ವಿಜ್ಞಾನ(ಮಾನವ ಅಭಿವೃದ್ಧಿ ಮತ್ತು ಕುಟುಂಬ ಸಂಬಂಧ), ಮನೋವಿಜ್ಞಾನ, ಮನೋವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕೌನ್ಸೆಲಿಂಗ್ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ. ಮಾಸಿಕ 30,000 ರೂ. ವೇತನ ನೀಡಲಾಗುವುದು.

ಕೇಸ್ ವರ್ಕರ್/ಸಮಾಜ ಕಾರ್ಯಕರ್ತ-2 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಬಿಎಸ್‌ಡಬ್ಲ್ಯೂ, ಬಿ.ಎ (ಸಮಾಜಶಾಸ್ತ್ರ) ಮಹಿಳಾ ಅಧ್ಯಯನದಲ್ಲಿ ಪದವೀಧರಾಗಿರಬೇಕು. ಎರಡು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಮಾಸಿಕ 25,000 ರೂ.ವೇತನ ನೀಡಲಾಗುವುದು.

ಪ್ಯಾರಲೀಗಲ್ ಪರ್ಸನಲ್ /ಲಾಯರ್ – 2 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಕಾನೂನು ಪದವಿ ಜೊತೆಗೆ 2-3 ವರ್ಷಗಳ ಅನುಭವ ಹೊಂದಿರಬೇಕು. ಮಾಸಿಕ 25,000 ರೂ. ವೇತನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಒನಕೆ ಓಬವ್ವ ಸ್ಟೇಡಿಯಂ ಹತ್ತಿರ, ಜಿಲ್ಲಾ ಬಾಲಭವನ ಆವರಣ, ಚಿತ್ರದುರ್ಗ ಇ-ಮೇಲ್ [email protected]  ಹಾಗೂ ದೂರವಾಣಿ ಸಂಖ್ಯೆ 08194-234579ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular