HomeLatest Newsದಂತ ವೈದ್ಯನ ಎಡವಟ್ಟು: ಹುಳುಕು ಹಲ್ಲಿನ ಬದಲು ಸರಿಯಿದ್ದ ಹಲ್ಲನ್ನು ಕಿತ್ತ ಡಾಕ್ಟರ್!

ದಂತ ವೈದ್ಯನ ಎಡವಟ್ಟು: ಹುಳುಕು ಹಲ್ಲಿನ ಬದಲು ಸರಿಯಿದ್ದ ಹಲ್ಲನ್ನು ಕಿತ್ತ ಡಾಕ್ಟರ್!

ಅಜ್ಮೀರ್: ಕೆಲವೊಮ್ಮೆ ವೈದ್ಯರ ನಿರ್ಲಕ್ಷ, ಸಣ್ಣ ತಪ್ಪಿನಿಂದಾಗಿ ಆಗುವ ಅನಾಹುತ ರೋಗಿ ಜೀವನ ಪರ್ಯಂತ ನುಬವಿಸಬೇಕಾಅದ ಸ್ಥಿತಿ ಬರುತ್ತದೆ. ಇಲ್ಲೊಂದು ಘಟನೆಯಲ್ಲಿ ದಂತ ವೈದ್ಯರೊಬ್ಬರು ಹುಳುಕು ಹಲ್ಲು ಕೀಳುವ ಬದಲು ಸರಿಯಿದ ಹಲ್ಲನ್ನೇ ಕಿತ್ತು ಎಡವಟ್ಟು ಮಾಡಿಕೊಂಡಿದ್ದಾರೆ.

ಅಜ್ಮೀರ್​ನ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಚನ್ನಾಗಿರುವ ಹಲ್ಲನ್ನು ಕಳೆದುಕೊಂಡಿದ್ದಾರೆ. ಘಟನೆ ಬಳಿಕ ಆಸ್ಪತ್ರೆಯಲ್ಲಿ ಭಾರಿ ಗಲಾಟೆ ನಡೆದಿದ್ದು, ಪರಿಸ್ಥಿತಿ ವೀಕೋಪಕ್ಕೆ ತಿರುಗಿದ ಪ್ರಸಂಗವೂ ನಡೆಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಬಾನಾ ಖಾನ್ ಎಂಬ ಮಹಿಳೆ ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಅಜ್ಮೀರ್ ನ ಜವಹರಲಾಲ್ ನೆಹರು ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯ ವೈದ್ಯರು ಅವರ ಒಂದು ಹಲ್ಲು ಹುಳುಕಾಗಿದ್ದು, ಅದನ್ನು ತೆಗೆಯಬೇಕೆಂದು ಸಲಹೆ ನೀಡಿದ್ದರು. ಅದರಂತೆ ಶುಕ್ರವಾರ ಶಬಾನಾ ತಮ್ಮ ಪತಿಯೊಂದಿಗೆ ಚಿಕಿತ್ಸೆಗೆ ಬಂದಿದ್ದರು. ಆದರೆ, ವೈದ್ಯರು ನೋವಿದ್ದ ಹಲ್ಲಿನ ಬದಲಿಗೆ ಪಕ್ಕದಲ್ಲಿದ್ದ ಆರೋಗ್ಯಕರ ಹಲ್ಲನ್ನು ಹೊರತೆಗೆದಿದ್ದಾರೆ ಎಂದು ಶಬಾನಾ ಆರೋಪಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತನಗೆ ತೀವ್ರ ನೋವಾಗುತ್ತಿದ್ದು, ತಪ್ಪು ಹಲ್ಲು ತೆಗೆಯಲಾಗುತ್ತಿದೆ ಎಂದು ವೈದ್ಯರಿಗೆ ಪದೇ ಪದೇ ಹೇಳಿದರೂ ಅವರು ಕೇಳದೇ ನಿರ್ಲಕ್ಷ ಮಾಡಿದ್ದಾರೆ. ವೈದ್ಯರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುವುದರಲ್ಲಿ ನಿರತರಾಗಿದ್ದರು. ವೈದ್ಯರ ಬೇಜವಾಬ್ದಾರಿಯಿಂದಲೇ ಹುಳುಕು ಹಲ್ಲಿನ ಬದಲಾಗಿ ತಾನು ಸರಿಯಿರುವ ಹಲ್ಲು ಕಳೆದುಕೊಂಡಿದ್ದೇನೆ ಎಂದು ದೂರಿದ್ದಾರೆ.

ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಆಸ್ಪತ್ರೆ ಆವರಣದಲ್ಲಿ ಕೆಲ ಕಾಲ ಕೋಲಾಹಲವುಂಟಾಯಿತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular